ಚಿತ್ರದುರ್ಗ: ಪೊಲೀಸ್ ಜೀಪ್ ಮೇಲೆ ಕಳ್ಳರು ಕಲ್ಲೆಸೆದಿರುವಂತಹ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕುದಾಪುರ ಬಳಿ ನಿನ್ನೆ ರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಪೊಲೀಸರು ತಡೆದರೂ ಬೊಲೆರೊ ವಾಹನ ನಿಲ್ಲಿಸದೆ ಹೋಗಿದ್ದಾರೆ. ಕಳ್ಳರೆಂಬ ಶಂಕೆ ಮೇಲೆ ನಾಯಕನಹಟ್ಟಿ ಠಾಣೆ ಪೊಲೀಸರು ಚೇಸ್​ ಮಾಡಿದ್ದಾರೆ. ಈ ವೇಳೆ ಪೊಲೀಸ್ ಜೀಪ್ ಮೇಲೆ ಕಲ್ಲೆಸೆದಿದ್ದಾರೆ.

ಈ ವೇಳೆ ನಾಯಕನಹಟ್ಟಿ ಠಾಣೆ ಪಿಎಸ್​ಐ ಶಿವಕುಮಾರರಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಕುದಾಪುರ ಬಳಿಯಿಂದ ಕಳ್ಳರ ಗ್ಯಾಂಗ್ ಪರಾರಿ ಆಗಿದ್ದಾರೆ. ಇಂದು ಘಟನಾ ಸ್ಥಳಕ್ಕೆ ಎಸ್​ಪಿ ಧರ್ಮೇಂದರ್ ಕುಮಾರ್ ಮೀನಾ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.