ಚಿತ್ರದುರ್ಗ: ಚಳ್ಳಕೆರೆ ತಹಶೀಲ್ದಾರ್ ಜೀಪಿಗೆ ಯುವಕನೊಬ್ಬ ಬೆಂಕಿ ಹಚ್ಚಿ ದುಷ್ಕೃತ್ಯ ಮೆರೆದಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ನಗರದ ಗಾಂಧಿ ನಗರ ನಿವಾಸಿ ಪೃಥ್ವಿರಾಜ್ ಕೃತ್ಯ ಎಸಗಿದ ಆರೋಪಿ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಚೇರಿ ಮುಂಭಾಗ ಈ ಘಟನೆ ನಡೆದಿದೆ. ತಹಶೀಲ್ದಾರ್ ರೆಹಾನ್ ಪಾಷಾ ಜೀಪಿಗೆ ಪೃಥ್ವಿರಾಜ್ ಪೆಟ್ರೋಲ್ ಬೆಂಕಿ ಸುರಿದಿದ್ದಾನೆ.
ಈ ಹಿಂದೆ ವಿಧಾನಸೌಧ ಮುಂದೆ ಬೈಕ್ ಬೆಂಕಿ ಹಚ್ಚಿದ್ದ ಪ್ರಥ್ವಿರಾಜ್ ಚಳ್ಳಕೆರೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿದ್ದ. ಪೊಲೀಸ್ ಜೀಪಿಗೆ ಬೆಂಕಿ ಹಚ್ಚಲು ಬಂದು, ತಹಶಿಲ್ದಾರ್ ಜೀಪಿಗೆ ಬೆಂಕಿ ಹಚ್ಚಿ ಹುಚ್ಚಾಟ ನಡೆಸಿದ್ದಾನೆ. ಘಟನೆಯ ಕುರಿತು ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೃಥ್ವಿರಾಜ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

