ಚಿತ್ರದುರ್ಗ: ಮುರುಘಾಮಠದಲ್ಲಿದ್ದ ಮುರುಘಾ ಶ್ರೀ ಬೆಳ್ಳಿ ಪುತ್ಥಳಿಯನ್ನು ಖದೀಮರು ಕಳ್ಳತನ ಮಾಡಿರುವ ಘಟನೆ ನಡೆದಿದ್ದು, ಈ ಕುರಿತು ಚಿತ್ರದುರ್ಗದ ಮುರುಘಾ ಮಠದಲ್ಲಿ ಮಾತನಾಡಿದ ದಾವಣಗೆರೆಯ ವಿರಕ್ತಮಠದ ಬಸವಪ್ರಭುಶ್ರೀ, ‘ಜೂ.26 ರಿಂದ ಮಠದ ದರ್ಬಾರ್ ಹಾಲ್​ನಲ್ಲಿ ಸಿಸಿಟಿವಿ ಆಫ್ ಆಗಿದೆ. ಈ ವೇಳೆ ದರ್ಬಾರ್ ಹಾಲ್​ನಲ್ಲಿದ್ದ 20 ಲಕ್ಷ ಮೌಲ್ಯದ 20 ಕೆಜಿ ತೂಕದ ಬೆಳ್ಳಿ ಪುತ್ಥಳಿ ಕಳ್ಳತನ ಆಗಿದೆ. ಈ ಕುರಿತು ಆಡಳಿತ ಮಂಡಳಿ ಸದಸ್ಯ ಬಸವಕುಮಾರಶ್ರೀ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದಾರೆ.

ಇನ್ನು ಬೆಳ್ಳಿ ಪುತ್ತಳಿ ಕುರಿತು ಪೊಲೀಸ್‌ ಈಗಾಗಲೆ ಕಣಕ್ಕಿಳಿದಿದ್ದಾರೆ.ಬೆಳ್ಳಿ ಪುತ್ಥಳಿ ಬಗ್ಗೆ ಈವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಇಂದು ಮಧ್ಯಾಹ್ನ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸುತ್ತೇವೆ. ಪೊಲೀಸ್ ತನಿಖೆಯಿಂದ ಬೆಳ್ಳಿ ಪುತ್ಥಳಿ ಕಳ್ಳತನ ಕೇಸ್ ಬಯಲಾಗಬೇಕಿದೆ ಎಂದು ಮಠದ ಆಡಳಿತ ಸಮಿತಿ ಸದಸ್ಯ ಬಸವಕುಮಾರಶ್ರೀ ಸ್ಪಷ್ಟನೆ ನೀಡಿದರು.