ಚಿತ್ರದುರ್ಗ: ಮುರುಘಾ ಮಠದ ದರ್ಬಾರ್ ಹಾಲ್ ನಲ್ಲಿ ಕಳುವಾಗಿದ್ದ ಶ್ರೀಗಳ ಬೆಳ್ಳಿ ಮೂರ್ತಿ ಇದೀಗ ದೂರು ದಾಖಲಾಗುತ್ತಿದ್ದಂತೆ ಮಠದ ಆವರಣದಲ್ಲೇ ಪತ್ತೆಯಾಗಿದೆ.

22ಕೆಜಿ ತೂಕದ 15 ಲಕ್ಷ ಮೌಲ್ಯದ ಬೆಳ್ಳಿ ಮೂರ್ತಿಯನ್ನು ಮುರುಘಾ ಶರಣ ಗುರು ವಂದನ ಕಾರ್ಯಕ್ರಮದಲ್ಲಿ ಉಡುಗೊರೆ ನೀಡಲಾಗಿತ್ತು, ಇದನ್ನು ಮಠದ ದರ್ಬಾರ್ ಹಾಲ್ ನಲ್ಲಿ ಇಡಲಾಗಿತ್ತು ಇದಾದ ಬಳಿಕ ಮೂರ್ತಿ ನಾಪತ್ತೆಯಾಗಿತ್ತು ಈ ಕುರಿತು ಬಸವ ಕುಮಾರ ಸ್ವಾಮೀಜಿ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು, ಅದರಂತೆ ಮಠಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

ಇತ್ತ ಪೊಲೀಸರು ತನಿಖೆ ಆರಂಭಿಸುತ್ತಿದ್ದಂತೆ ಕಳ್ಳರು ಮೂರ್ತಿಯನ್ನು ಗೋಣಿ ಚೀಲದಲ್ಲಿ ಹಾಕಿ ಚಿತ್ರದುರ್ಗ ನಗರದ ಮುರುಘಾ ಮಠದ ಆವರಣದ ಬಳಿ ಬಿಟ್ಟು ಹೋಗಿದ್ದಾರೆ.