ಚಿತ್ರದುರ್ಗ: ಎಫ್​ಎಸ್​​ಎಲ್​ ತಂಡವು ಆರೋಪಿಗಳಿಂದ ಡಿಲೀಟ್​​ ಆದ ರೇಣುಕಾಸ್ವಾಮಿ ಫೋಟೋಗಳನ್ನು ರಿಟ್ರೀವ್​ ಮಾಡಿದ್ದಾರೆ. ಅದರಲ್ಲಿ ಎರಡು ಫೋಟೋಗಳು ಎಲ್ಲೆಡೆ ವೈರಲ್​ ಆಗಿವೆ. ಪಟ್ಟಣಗೆರೆ ಶೆಡ್​ನಲ್ಲಿ ರೇಣುಸ್ವಾಮಿಯನ್ನು ಥಳಿಸಿದ ಮತ್ತು ಕೊಲೆಗೈದ ಫೋಟೋಗಳು ಸಿಕ್ಕಿವೆ. ಆದರೀಗ ರೇಣುಕಾಸ್ವಾಮಿಯ ಮತ್ತೊಂದು ಫೋಟೋ ಸಿಕ್ಕಿದ್ದು, ವೈರಲ್​ ಆಗುತ್ತಿದೆ.

ಕಿಡ್ನಾಪ್​ಗೂ ಮುನ್ನ ರೇಣುಕಾಸ್ವಾಮಿಯ ಫೋಟೋ ಸಿಕ್ಕಿದೆ. ರೇಣುಕಾಸ್ವಾಮಿ ಚಲನವಲನಗಳನ್ನು ಹಿಂಬಾಲಿಸಿ ಆರೋಪಿಗಳು ತೆಗೆದಿದ್ದ ಫೋಟೋ ಇದಾಗಿದೆ.

ರೇಣುಕಾಸ್ವಾಮಿ ಕಿಡ್ನಾಪ್ ಆಗುವ ದಿನ ತನ್ನ ಸ್ಕೂಟಿಗೆ ಗಾಳಿ ಹಿಡಿಸಿದ್ದನು. KEB ಕಲ್ಯಾಣ ಮಂಟಪ ರಸ್ತೆಯಲ್ಲಿನ ಪಂಕ್ಷರ್ ಶಾಪ್​ನಲ್ಲಿ ಗಾಳಿ ಹಿಡಿಸಿದ್ದನು. ಗಾಳಿ ಹಿಡಿಸಿದ್ದನ್ನ ಕಿಡ್ನಾಪರ್ಸ್ ಆಟೋದಲ್ಲಿ ಕುಳಿತು ಫೋಟೋ ತೆಗೆದಿದ್ದರು. ಇದೀಗ ಆ ಫೋಟೋ ವೈರಲ್ ಆಗಿದೆ.​ ರೇಣುಕಾಸ್ವಾಮಿ ತನ್ನ ಯಮಹಾ ಸ್ಕೂಟಿಗೆ ಗಾಳಿ ತುಂಬಿಸಿ ಪರ್ಸ್​ ತೆಗೆಯುತ್ತಿರುವ ಫೋಟೋ ಸಿಕ್ಕಿದೆ. ಈ ವೇಳೆ ರೇಣುಕಾಸ್ವಾಮಿ ಆಟೋದಲ್ಲಿರುವವರನ್ನು ನೋಡಿದ್ದಾನೆ. ಅದಕ್ಕೆ ಸರಿಯಾಗಿ ಆರೋಪಿಗಳು ಫೋಟೋವನ್ನು ಕ್ಲಿಕ್ಕಿಸಿದ್ದಾರೆ.