ಚಿತ್ರದುರ್ಗ : ನಟ ಶಿವರಾಜ್ ಕುಮಾರ್ ಮೇಲೆ ಪವರ್ ಫ್ಲ್ಯಾಟ್ ಬ್ಲಾಸ್ಟ್ ಸಿಡಿದಿದ್ದು, ಜಸ್ಟ್ ಮಿಸ್ ಆಗಿರುವ ಘಟನೆ ಚಿತ್ರದುರ್ಗದ ಖಾಸಗಿ ಶೋ ರೂಂ ನಲ್ಲಿ ನಡೆದಿದೆ.

ಬೇಲ್ ಸಿನಿಮಾ ಪ್ರಮೋಶನ್ ಗೆ ಚಿತ್ರದುರ್ಗಕ್ಕೆ ನಟ ಶಿವರಾಜಕುಮಾರ್ ಆಗಮಿಸಿದ್ದರು. ಅಭಿಮಾನಿಗಳಿಂದ‌ ಪಟಾಕಿ ಸಿಡಿಸಿ ಅದ್ಧೂರಿ ಸ್ವಾಗತ ಕೋರಲಾಯಿತು.

ಪಟಾಕಿ ಸಿಡಿಸುವ ವೇಳೆ ಪವರ್ ಫ್ಲ್ಯಾಟ್ ಬ್ಲಾಸ್ಟ್ ಆಗಿ ಅವಘಡ ಸಂಭವಿಸಿದೆ. ಬ್ಲಾಸ್ಟ್ ನಿಂದ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಘಟನೆಯಲ್ಲಿ ನಟ ಶಿವರಾಜ್ ಕುಮಾರ್ ಗೆ ಯಾವುದೇ ಅಪಾಯ ಇಲ್ಲ ಎಂಬ ಮಾಹಿತಿ ತಿಳಿದು ಬಂದಿದೆ.