ಚಿತ್ರದುರ್ಗ : ರಾಜ್ಯವನ್ನೇ ಬೆಚ್ಚಿ ಬೀಳಿಸಿರುವ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ A-8 ಆರೋಪಿ ಚಿತ್ರದುರ್ಗದ ಡಿವೈಎಸ್ ಪಿ ಕಚೇರಿಯಲ್ಲಿ ಗುರುವಾರ ಶರಣಾಗಿದ್ದಾನೆ. ಆರೋಪಿ ರವಿ ಪೊಲೀಸರ ಮುಂದೆ ಶರಣಾಗಿದ್ದಾನೆ. ರವಿ ಚಿತ್ರದುರ್ಗದ ಕುರುಬರಹಟ್ಟಿ ಗ್ರಾಮದ ನಿವಾಸಿಯಾಗಿದ್ದಾನೆ. ಡಿವೈಎಸ್ ಪಿ ದಿನಕರ್ ಅವರ ಮುಂದೆ ರವಿ ಶರಣಾಗಿದ್ದಾನೆ.

ರವಿಯ ಬಾಡಿಗೆ ಕಾರಿನಲ್ಲೇ ಹಂತಕರು ಬೆಂಗಳೂರಿಗೆ ಹೋಗಿದ್ದು, ರವಿ ETS ಬಾಡಿಗೆ ಕಾರಿನಲ್ಲಿ ರೇಣುಕಾಸ್ವಾಮಿ ಕಿಡ್ನಾಪ್ ಮಾಡಲಾಗಿತ್ತು.ಬಾಡಿಗೆ ಇದೆ ಎಂದು ರವಿಗೆ ನಂಬಿಸಿ ರಘು ಅಂಡ್ ಟೀಂ ಕರೆದೊಯ್ದಿತ್ತು ಎಂದು ತನಿಖೆ ವೇಳೆ ತಿಳಿದು ಬಂದಿದೆ. ಪ್ರಕರಣ ಬಯಲಾಗುತ್ತಿದ್ದಂತೆ ರವಿ ತಲೆ ಮರೆಸಿಕೊಂಡಿದ್ದ.

ಸದ್ಯ ಆರೋಪಿಗಳ ಸಂಖ್ಯೆ ನಟ ದರ್ಶನ್, ಪವಿತ್ರಾ ಗೌಡ ಸೇರಿ ಒಟ್ಟು ಆರೋಪಿಗಳು 17 ಮಂದಿ ಎಂಬುದು ಪೊಲೀಸರ ತನಿಖೆಯಲ್ಲಿ ಕಂಡು ಬಂದಿದೆ. ತಲೆಮರೆಸಿಕೊಂಡಿರುವ ಮೂವರಿಗಾಗಿ ಶೋಧ ಮುಂದುವರಿದಿದೆ.