ಚಿಕ್ಕಮಗಳೂರು: ಕಾಫಿ ಎಸ್ಟೇಟ್ ಒಂದರಲ್ಲಿ ಮಾಂಸಕ್ಕಾಗಿ ಕಾಡುಕೋಣವನ್ನು ಶಿಕಾರಿ ಮಾಡಿದ್ದ ಆರೋಪದ ಮೇಲೆ ಎಸ್ಟೇಟ್ ಮ್ಯಾನೇಜರ್ ಸೇರಿ ಆರು ಮಂದಿಯನ್ನು ಬಂಧಿಸಲಾಗಿದೆ.
ಎಸ್ಟೇಟ್ ಮಾಲೀಕ ಸೇರಿ ಇನ್ನೂ ನಾಲ್ಕು ಮಂದಿ ಪರಾರಿಯಾಗಿರುವ ಘಟನೆ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮದಲ್ಲಿ ಶುಕ್ರವಾರ ನಡೆದಿರುವ ಬಗ್ಗೆ ವರದಿಯಾಗಿದೆ.
ಆರೋಪಿಗಳನ್ನು ಕಲ್ಮನೆ ಎಸ್ಟೇಟ್, ತೋಟದ ಫೀಲ್ಡ್ ಆಫೀಸರ್ ರವೀಶ್ ಬಿ.ಎಸ್. (35), ರೈಟರ್ ಪ್ರದೀಪ್ ದೇವಾಡಿಗ (41), ತೋಟದ ಮೇಸ್ತ್ರಿಗಳಾದ ದೇಜಪ್ಪ (46), ಸೀನ (50) ತೋಟದ ವಾಹನ ಚಾಲಕ ಮಂಜಯ್ಯ (48) ಕೂಲಿಕೆಲಸಗಾರ ಸುಂದರ(50), ಸುಂದರೇಶ್ (45), ದಿಲೀಪ್ (45) ಜೀವನ್ (42) ಕಲ್ಮನೆ ಎಸ್ಟೇಟ್ ಮಾಲೀಕ ಮಾಲೀಕ ಧೀರಜ್ (42) ಎಂದು ಗುರುತಿಸಲಾಗಿದೆ.

