ಚಿಕ್ಕಮಗಳೂರು: ಪುಟ್ಟ ಕಂದಮ್ಮವೊಂದು ದಾರಿಣವಾಗಿ ಸಾವನ್ನಪ್ಪಿದ ಘಟನೆ ಎನ್.ಆರ್. ಪುರ ತಾಲೂಕಿನ ಮೀನುಕ್ಯಾಂಪ್ ರಾವೂರು ಗ್ರಾಮದಲ್ಲಿ ನಡೆದಿದೆ.

ಮೃತಳನ್ನು ಪೂರ್ವಿ (ಒಂದೂವರೆ ವರ್ಷ) ಎಂದು ಗುರುತಿಸಲಾಗಿದೆ. ಈ ದುರ್ಘಟನೆ ಡಿಸೆಂಬರ್ 19ರಂದು ನಡೆದಿದೆ. ಪೂರ್ವಿ ಬಕೆಟ್​​ನಲ್ಲಿದ್ದ ನೀರಿನಲ್ಲಿ ಆಟವಾಡುತ್ತಾ ಇದ್ದಳು.

ಹೀಗೆ ಆಡವಾಡುತ್ತಾ ಆಕಸ್ಮಿತವಾಗಿ ನೀರಿನ ಬಕೆಟ್‌ಗೆ ತಲೆಕೆಳಗಾಗಿ ಬಿದ್ದು ಉಸಿರುಗಟ್ಟಿದೆ. ತಕ್ಷಣ ಮಗುವನ್ನ ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲೇ ಮಗು ಪ್ರಾಣ ಬಿಟ್ಟಿದೆ. ಈ ಕುರಿತು ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.