ಚಿಕ್ಕಬಳ್ಳಾಪುರ: ಪೊಲೀಸ್ ಠಾಣೆ ಯಲ್ಲಿ ಪ್ರೇಮಿಗಳಿಗೆ ಮದುವೆ ಮಾಡಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರ ನಡೆದಿದೆ. ಯುವತಿಗೆ ಕಾಲುಂಗರ ತೊಡಿಸಿ ಸಬ್ ಇನ್ಸ್ಪೆಕ್ಟರ್ ಮದುವೆ ಮಾಡಿಸಿದ್ದಾರೆ.

ತಂದೆಯ ಸ್ಥಾನ ದಲ್ಲಿ ನಿಂತು ಯುವತಿಗೆ ಪಿಎಸ್ಐ ಮದುವೆ ಮಾಡಿಸಿದ್ದಾರೆ. ಪ್ರೇಮಿಗಳಿಗೆ ಠಾಣೆಯ ಮುಂಭಾಗ ಸಾಂಪ್ರದಾಯದಂತೆ ಮದುವೆ ಮಾಡಿಸಿದ್ದಾರೆ. ಪೊಲೀಸ್ ಸಬ್ ಇನ್ಸ್ಪೆಕ್ಟರ್ ವೇಣುಗೋಪಾಲ್, ಪದ್ಮಾವತಮ್ಮ ನೇತೃತ್ವದಲ್ಲಿ ಮದುವೆ ನಡೆದಿದೆ.

ಪೊಲೀಸ್ ಠಾಣೆಯಲ್ಲಿ ನವ ಜೀವನಕ್ಕೆ ಅಂತರ್ ಜಾತಿ ಪ್ರೇಮಿಗಳು ಕಾಲಿಟ್ಟಿದ್ದಾರೆ. ಒಕ್ಕಲಿಗ ಸಮುದಾಯದ ಹುಡುಗ, ಪದ್ಮಶಾಲಿ ಸಮುದಾಯದ ಹುಡುಗಿಗೆ ವಿವಾಹ ಮಾಡಿಸಿದ್ದಾರೆ. ಕಾರ್ತಿಕ್ (22), ಅಂಕಿತಾ (22) ಪ್ರೀತಿಸಿ ಮದುವೆಯಾದ ಪ್ರೇಮಿಗಳು. 6 ವರ್ಷಗಳಿಂದ ಪರಸ್ಪರ ಇಬ್ಬರು ಪ್ರೀತಿಸುತ್ತಿದ್ದರು.