ಚಾಮರಾಜನಗರ : ಕಾರು ಸವಾರರ ಮೇಲೆ ಕಾಡಾನೆ ದಿಢೀರ್ ದಾಳಿಗೆ ಯತ್ನಿಸಿದ ಘಟನೆ ಗುಂಡ್ಲುಪೇಟೆ ಬಂಡೀಪುರದ ಅರಣ್ಯ ಪ್ರದೇಶದ ಮಾರ್ಗ ಮಧ್ಯ ನಡೆದಿದೆ.
ಕಾರಿನಲ್ಲಿ ಹೋಗುತ್ತಿದ್ದ ಪ್ರಯಾಣಿಕರ ಕಾರಿಗೆ ಆನೆ ಎರಗಿ ಬಂದಿದೆ. ಸಮಯ ಪ್ರಜ್ಞೆಯಿಂದ ಚಾಲಕ ಜೋರಾಗಿ ಹಾರ್ನ್ ಹೊಡೆದಿದ್ದಾನೆ. ಹಾರ್ನ್ ಸದ್ದಿಗೆ ಹೆದರಿ ಆನೆ ಹಿಂದೆ ಸರಿದಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಕೇರಳದ ಮುತ್ತಂಗ ಬಳಿ ಘಟನೆ ನಡೆದಿದೆ. ಕೂದಲೆಳೆ ಅಂತರದಲ್ಲಿ ಕಾರು ಪ್ರಯಾಣಿಕರು ಪಾರಾಗಿದ್ದಾರೆ.

