ಚಾಮರಾಜನಗರ : ಕನ್ನಡ ಮೇರು ನಟ ಪದ್ಮಭೂಷಣ, ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಪುರುಸ್ಕೃತ ಡಾ. ರಾಜ್ ಕುಮಾರ್ ರವರ ಸಹೋದರಿ ನಾಗಮ್ಮ ರವರು ತಮಿಳುನಾಡಿನ ತಾಳವಾಡಿಯ ಗಾಜನೂರಿನ ನಿವಾಸದಲ್ಲಿ ನಿಧನರಾಗಿದ್ದಾರೆ.

ಡಾ.ರಾಜ್ ಕುಮಾರ್ ರವರ ಸಹೋದರಿಯಾಗಿದ್ದ ನಾಗಮ್ಮರವರು ಪುನೀತ್ ರಾಜ್ ಕುಮಾರ್ ಎಂದರೆ ಬಲು ಪ್ರೀತಿಇತ್ತು, ಪುನೀತ್ ರಾಜ್ ಕುಮಾರ್ ಮೃತಪಟ್ಟ ಸಂಗತಿಯನ್ನು ನಾಗಮ್ಮ ರವರಿಗೆ ಕೊನೆ ತನಕವೂ ತಿಳಿದಿರಲಿಲ್ಲ. ಶುಕ್ರವಾರ ಬೆಳಗ್ಗೆ ಗಾಜನೂರಿನ ಡಾ.ರಾಜ್ ಕುಮಾರ್ ರವರಿಗೆ ಸೇರಿದ ದೊಡ್ಡ ಬಂಗಲೆಯಲ್ಲಿ ಮೃತಪಟ್ಟಿದ್ದಾರೆ.