ಗುಂಡ್ಲುಪೇಟೆ : ರಾಜ್ಯದಲ್ಲಿ ಯೂರಿಯಾ ರಸಗೊಬ್ಬರದ ಅಭಾವ ಹೆಚ್ಚಾಗಿ ರೈತಾಪಿ ವರ್ಗ ಪರದಾಡುತ್ತಿದ್ದರೆ ಇತ್ತ ಅಕ್ರಮವಾಗಿ ಕೇರಳಕ್ಕೆ ಟನ್ ಗಟ್ಟಲೆ ಯೂರಿಯಾ ರಸಗೊಬ್ಬರವನ್ನ ಸಾಗಾಟ ಮಾಡುವ ಜಾಲ ಸಕ್ರಿಯವಾಗಿರುವುದಕ್ಕೆ ಪುರಾವೆಯಾಗಿ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬಹಿರಂಗವಾಗಿದೆ.

ನಂಜನಗೂಡಿನ ಗೋದಾಮಿನಿಂದ ಯೂರಿಯಾ ತುಂಬಿ ಗುಂಡ್ಲುಪೇಟೆ ಮಾರ್ಗವಾಗಿ ನೆರೆಯ ಕೇರಳಕ್ಕೆ ಸಂಚರಿಸುತ್ತಿದ್ದ ಲಾರಿಯನ್ನ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಮೂಲೆಹೊಳೆ ಸಮೀಪದ ಪೂಂಕುಳಿ ಎಂಬಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸುಮಾರು 24 ಟನ್ ಗೂ ಹೆಚ್ಚು ಯೂರಿಯಾ ಹೊತ್ತೊಯ್ಯುತ್ತಿದ್ದ ಲಾರಿಯನ್ನ ವಶ ಪಡೆಯುತ್ತಿದ್ದಂತೆ ಚಾಲಕ ಹೆದರಿ ಪರಾರಿಯಾಗಿದ್ದಾನೆ.
ನಂಜನಗೂಡಿನಿಂದ ಲಾರಿಯಲ್ಲಿ ಅಕ್ರಮವಾಗಿ ಕೇರಳದ ಕಡೆಗೆ ಯೂರಿಯಾ ಸಾಗಿಸಲಾಗುತ್ತಿದೆ ಎಂದು ಮೈಸೂರು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಅದರಂತೆ ಕಾರ್ಯಚರಣೆಗಿಳಿದ ಅಧಿಕಾರಿಗಳು ಕರ್ನಾಟಕ ಗಡಿಯನ್ನ ದಾಟಿ ತೆರಳುತ್ತಿದ್ದ ಲಾರಿಯನ್ನ ಕೇರಳಕ್ಕೆ ಸೇರಿದ ಪೂಂಕುಳಿ ಎಂಬ ಸ್ಥಳದಲ್ಲಿ ತಮ್ಮ ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಅಕ್ರಮವಾಗಿ ಯೂರಿಯಾ ಸಾಗಿಸುತ್ತಿದ್ದ ದಂದೇಕೋರರು ರಶೀದಿಯಲ್ಲಿ ಭತ್ತ ಎಂದು ನಮೂದಿಸಿ ವಂಚಿಸಿದ್ದಾರೆ.

