ಚಾಮರಾಜನಗರ: ಬೆಳ್ಳಂಬೆಳಗ್ಗೆ ಸಫಾರಿಗೆ ಹೋದ ಪ್ರವಾಸಿಗರಿಗೆ ಹುಲಿ ದರ್ಶನವಾಗಿದೆ. ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ಹುಲಿ ಸಂರಕ್ಷಿತ ಪ್ರದೇಶದ ಕೆ ಗುಡಿ ಸಫಾರಿ ವೇಳೆ ತೀರಾ ಅಪರೂಪಕ್ಕೆ ಹುಲಿ ಸಿಕ್ಕಿದೆ.

ನಾಗರಹೊಳೆ ಹಾಗೂ ಬಂಡೀಪುರ ಸಫಾರಿ ಬ್ಯಾನ್ ಬೆನ್ನಲ್ಲೇ ಕೆ ಗುಡಿ ಸಫಾರಿಯತ್ತ ಪ್ರವಾಸಿಗರು ಮುಖ ಮಾಡಿದ್ದಾರೆ. ಹುಲಿ ಕಂಡು ಪ್ರವಾಸಿಗರು ಪುಳಕಿತಗೊಂಡರು.