ಚಾಮರಾಜನಗರ: ಪ್ರವಾಸಿಗರ ಫೇವರಿಟ್ ಹುಲಿಗೆ ಗಾಯವಾಗಿರುವ ಕುರಿತು ವರದಿಯಾಗಿದೆ, ನಾಲ್ಕು ಮರಿಗಳಿರುವ ತಾಯಿ ಹುಲಿಗೆ ಭೇಟೆ ಯಾಡುವ ಸಂದರ್ಭದಲ್ಲಿ ಪೆಟ್ಟಾಗಿರಬಹುದು ಎನ್ನಲಾಗಿದೆ.

ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ತನ್ನ ನಾಲ್ಕು ಮರಿಗಳೊಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಪ್ರವಾಸಿಗರ ನೆಚ್ಚಿನ ಹುಲಿಗೆ ಕಾಲಿಗೆ ಪೆಟ್ಟಾಗಿರುವುದು ತಿಳಿದುಬಂದಿದೆ ಸದ್ಯ ಹುಲಿಯ ಮೇಲೆ ನಿಗಾ ಇರಿಸಿರುವ ಅರಣ್ಯ ಇಲಾಖೆ ಅಗತ್ಯಬಿದ್ದಲ್ಲಿ ಚಿಕಿತ್ಸೆ ಕೊಡಲು ಸಜ್ಜಾಗಿದೆ.

