ಗುಂಡ್ಲುಪೇಟೆ: ಪ್ರತಿಷ್ಠಿತ ಹುಲಿ ಸಂರಕ್ಷಿತಾ ಪ್ರದೇಶ ಬಂಡೀಪುರದಲ್ಲಿ ಸಪಾರಿ ವೇಳೆ ನಾಲ್ಕು ಹುಲಿಗಳು  ದರ್ಶನ ನೀಡಿದ್ದು ಅಪರೂಪದ ದೃಶ್ಯ ಕಂಡ ಪ್ರವಾಸಿಗರು ಫುಲ್ ಎಂಜಾಯ್ ಮಾಡಿದ್ದಾರೆ.

ಬಂಡೀಪುರದ ತಾವರಕಟ್ಟೆ ದೇವಸ್ಥಾನದ ಸಮೀಪ ಸಪಾರಿಗರಿಗೆ ದರ್ಶನ ನೀಡಿವೇ, ಹುಲಿಗಳನ್ನ ಸನಿಹದಲ್ಲೇ ಕಂಡ ಪ್ರವಾಸಿಗರು ಸಂಭ್ರಮಿಸಿದ್ದಾರೆ,

ಮಧ್ಯಾಹ್ನ ಸಪಾರಿಗೆ ತೆರಳಿದ್ದವರಿಗೆ ತಾವರಕಟ್ಟೆ ಸಮೀಪ ತಾಯಿ ಹುಲಿ ಮರಿಗಳೊಟ್ಟಿಗೆ ಕಾಣಿಸಿಕೊಂಡಿದೆ , ತನ್ನ ಮರಿಗಳೊಂದಿಗೆ ಆಗಾಗ್ಗೆ ಇದೇ ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ಬಂಡೀಪುರದೆಡೆ ಎಲ್ಲರ ಗಮನ ಬೇರೂರುವಂತೆ ಮಾಡಿದೆ.