ಗುಂಡ್ಲುಪೇಟೆ : ಕಗ್ಗಳದಹುಂಡಿ ರೈತರ ಜಮೀನಿನಲ್ಲಿ ಕಾಣಿಸಿಕೊಂಡಿದ್ದ ವ್ಯಾಘ್ರ ಮತ್ತೇ ಮದ್ದಯ್ಯನಹುಂಡಿ ಗ್ರಾಮದ ಕೆರೆ ಸಮೀಪ ಪ್ರತ್ಯಕ್ಷವಾಗಿದ್ದು ಬಾರಿ ಗಾತ್ರದ ಹುಲಿಯನ್ನ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಮದ್ದೂರು ವಲಯಕ್ಕೆ ಸೇರಿದ ಕಗ್ಗಳದಹುಂಡಿ ರೈತರ ಜಮೀನಿನಲ್ಲಿ ಎರಡು ಕಾಡು ಹಂದಿಗಳನ್ನ ಭೇಟೆಯಾಡಿ ತಿಂದು ಹಾಕಿದ್ದ ಹುಲಿ ಮತ್ತೇ ಕೂಗಳತೆ ಅಂತರದಲ್ಲೇ ಕಾಣಿಸಿಕೊಂಡಿದೆ.
ಕೆರೆ ಸಮೀಪ ನೀರು ಕುಡಿದು ತೆರಳುತ್ತಿರುವುದನ್ನ ಸ್ಥಳೀಯರು ಚಿತ್ರೀಕರಿಸಿದ್ದು ವ್ಯಾಘ್ರನ ಕಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಸದ್ಯ ಹುಲಿಯ ಚಲನವಲನದ ಮೇಲೆ ನಿಗಾವಹಿಸಿರುವ ಅರಣ್ಯ ಇಲಾಖೆ ಕೂಂಬಿಂಗ್ ಕಾರ್ಯಚರಣೆಗೆ ಮುಂದಾಗಿದೆ.

