ಗುಂಡ್ಲುಪೇಟೆ : ಗುರುವಾರ ಸಂಜೆ ವೇಳೆಯಲ್ಲಿ ಕೋಡಹಳ್ಳಿಯ ಮಹದೇಶ್ವರ ದೇವಸ್ಥಾನದ ಬಳಿ ಕಾಣಸಿಕ್ಕಿದ್ದ ವ್ಯಾಘ್ರ ಈಗ ಅಲ್ಲಿಯೇ ಜಮೀನೊಂದರಲ್ಲಿ ಅಡ್ಡಾಡುತ್ತಿರುವ ದ್ರಶ್ಯ ಲಭ್ಯವಾಗಿದ್ದು ಬೊಮ್ಮಲಾಪುರವಾಯ್ತು ಈಗ ಕೋಡಹಳ್ಳಿ ಸರದಿ ಎಂಬಂತಾಗಿದೆ.
ಗುಂಡ್ಲುಪೇಟೆ ತಾಲೂಕಿನ ಕೋಡಹಳ್ಳಿ ಗ್ರಾಮದಿಂದ ಶಿವಪುರ ಮಾರ್ಗವಾಗಿ ತೆರಳುವ ಮಾರ್ಗ ಮದ್ಯೆದಲ್ಲಿ ಕಾಣಸಿಕ್ಕಿದ್ದ ವ್ಯಾಘ್ರ ಈಗ ರೈತರ ಜಮೀನಿನಲ್ಲಿ ಬೀಡು ಬಿಟ್ಟಿದೆ ಅಂತ ಗ್ರಾಮದ ಮಹೇಶ್ ಆತಂಕ ಹೊರಹಾಕಿದ್ದಾರೆ.
ಗುರುವಾರ ಸಂಜೆ ಕಾಣ ಸಿಕ್ಕ ವ್ಯಾಘ್ರ ವಾಪಾಸ್ ಕಾಡಿಗೆ ಹೋಗಿರಬಹುದು ಎಂದು ನಾವು ಅಂದಾಜಿಸಿದ್ದೆವು ಆದರೆ ಗ್ರಾಮದ ಮರಿಯಪ್ಪ ಎಂಬವರ ಬಾಳೆ ತೋಟದಲ್ಲಿ ಕಾಣಸಿಕ್ಕಿದೆ, ಕಳೆದ ಕೆಲವು ದಿನಗಳ ಹಿಂದೆಯು ಸಹ ವ್ಯಾಘ್ರ ಕಾಣಿಸಿಕೊಂಡಿತ್ತು. ಆ ಬಳಿಕ ಹುಲಿ ಸೆರೆಗೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ರು ಸಹ ಪ್ರಯೋಜನವಾಗಿಲ್ಲ ಎಂದು ಗ್ರಾಮದ ಮಹೇಶ್ ದೂರಿದ್ದಾರೆ.
ಸದ್ಯ ಕೋಡಹಳ್ಳಿ ಗ್ರಾಮದ ಸುತ್ತಲಿನ ಪ್ರದೇಶದಲ್ಲಿ ಸಂಚರಿಸುತ್ತಿರುವ ಹುಲಿಯನ್ನ ಸೆರೆಹಿಡಿಯಲು ಅರಣ್ಯ ಇಲಾಖೆ ಮುಂದಾಗಬೇಕು ಎಂದು ಒತ್ತಾಯಿಸಿದ್ದು ಬೊಮ್ಮಲಾಪುರ ಗ್ರಾಮದಲ್ಲಾದ ಘಟನೆ ಮರುಕಳಿಸದಂತೆ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ.

