ಗುಂಡ್ಲುಪೇಟೆ : ಪ್ರತಿಷ್ಠಿತ ಹುಲಿ ಸಂರಕ್ಷಿತಾ ಪ್ರದೇಶ ಬಂಡೀಪುರದಲ್ಲಿ ಬೆಳ್ಳಂಬೆಳೆಗ್ಗೆ ಸಪಾರಿಗರಿಗೆ ಹುಲಿ ದರ್ಶನವಾಗಿದೆ, ಸಪಾರಿವಲಯ ಹಾಲಗಟ್ಟೆ ಕೆರೆಯಲ್ಲಿ ವಿಶ್ರಮಿಸುತ್ತಿದ್ದ ಹುಲಿಯ ದೃಶ್ಯ ಪ್ರವಾಸಿಗರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇತ್ತೀಚಿಗೆ ಬಂಡೀಪುರದಲ್ಲಿ ಮೂರ್ಕೆರೆ ಹೆಣ್ಣು ಹುಲಿ ಪ್ರವಾಸಿಗರಿಗೆ ತನ್ನ ನಾಲ್ಕು ಮರಿಗಳೊಟ್ಟಿಗೆ ದರ್ಶನ ನೀಡ್ತಿತ್ತು ಆದರೆ ಕಳೆದೊಂದು ತಿಂಗಳುಗಳಿಂದ ಮೂರ್ಕೆರೆ ಹೆಣ್ಣು ಹುಲಿ ನಾಪತ್ತೆಯಾಗಿದೆ.

ಸದ್ಯ ಹುಲಿ ಮರಿಗಳ ಪೋಷಣೆ ಜವಬ್ದಾರಿ ಅರಣ್ಯ ಇಲಾಖೆ ಮೇಲಿದೆ, ಮೂರ್ಕೆರೆ ಹೆಣ್ಣು ಹುಲಿ ಬಳಿಕ ಆಗ್ಗಾಗ್ಗೆ ದರ್ಶನ ನೀಡ್ತಿದ್ದು ಇದು ಸಹ ಹೆಣ್ಣು ಹುಲಿಯಾಗಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.