ಗುಂಡ್ಲುಪೇಟೆ : ದೇಶದ ಜನಪ್ರಿಯ ಹುಲಿ ರಕ್ಷಿತಾರಣ್ಯದಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಪ್ರವಾಸಿಗರಿಗೆ ಗರ್ಜಿಸುತ್ತಿದ್ದ ಹುಲಿಯು ದರ್ಶನ ಕೊಟ್ಟು ಎಲ್ಲರನ್ನೂ ಪುಳಕಿತಗೊಳಿಸಿದ ಘಟನೆ ನಡೆದಿದೆ.
ಬಂಡೀಪುರದ ಸಫಾರಿ ವಲಯದಲ್ಲಿ ಹುಲಿಯೊಂದು ದರ್ಶನ ಕೊಟ್ಟಿದ್ದು ಬಳಿಕ ಗರ್ಜಿಸಲು ಆರಂಭಿಸಿದೆ. ಹುಲಿ ಗರ್ಜನೆ ಕೇಳಿದ ಪ್ರವಾಸಿಗರು ರೋಮಾಂಚಿತರಾಗಿದ್ದು ವೀಡಿಯೋವನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಬಂಡೀಪುರದ ಹುಲಿ ಗರ್ಜನೆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗುತ್ತಿದೆ.

