ಗುಂಡ್ಲುಪೇಟೆ : ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಕೆಕ್ಕನಹಳ್ಳ ಭಾಗದಲ್ಲಿ ರಸ್ತೆ ಬದಿಯಲ್ಲೇ ಹುಲಿಯ ದರ್ಶನವಾಗಿದ್ದು ಸನಿಹದಲ್ಲೇ ವ್ಯಾಘ್ರನ ಕಂಡ ಪ್ರವಾಸಿಗರು ಪುಳಕಿತಗೊಂಡಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯದಲ್ಲಿ ಇತ್ತೀಚಿಗೆ ಹುಲಿಚಿರತೆಗಳ ದರ್ಶನವಾಗುತ್ತಿದೆ, ಹಚ್ಚಹಸಿರಿನಿಂದ ಕಂಗೊಳಿಸುತ್ತಿರುವ ವನ್ಯಧಾಮದಲ್ಲಿ ಪ್ರಾಣಿಗಳ ಕಲರವ ಹೆಚ್ಚಾಗಿದೆ.
ಬಂಡೀಪುರದ ಕೆಕ್ಕನಹಳ್ಳ ಚೆಕ್ಪೋಸ್ಟ್ ಸಮೀಪ ರಸ್ತೆ ಬದಿಯಲ್ಲೇ ಪ್ರವಾಸಿಗರಿಗೆ ದರ್ಶನ ನೀಡಿರುವ ವ್ಯಾಘ್ರ ಗಾಂಭೀರ್ಯದಿಂದ ಹೆಜ್ಜೆ ಹಾಕಿದೆ, ಸನಿಹದಲ್ಲೇ ಹುಲಿಯನ್ನ ಕಂಡ ಪ್ರವಾಸಿಗರು ವ್ಯಾಘ್ರನ ಗಾಂಭೀರ್ಯ ನಡಿಗೆಯನ್ನ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ದೃಶ್ಯ ಸಖತ್ ವೈರಲ್ಲಾಗಿದೆ.

