ಗುಂಡ್ಲುಪೇಟೆ: ಜಿಂಕೆ ಮಾಂಸವನ್ನು ಭೀಮ ಹುಲಿ ಹೊತ್ತೊಯ್ದ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ನಡೆದಿದೆ.
ಜಿಂಕೆಯನ್ನು ಬೇಟೆಯಾಡಿ, ಭೀಮ ಹುಲಿ ಅರ್ಧಂಬರ್ಧ ತಿಂದು ಹಾಕಿತ್ತು. ಅರ್ಧ ತಿಂದು ಉಳಿದರ್ಧ ಮಾಂಸವನ್ನು ಹೊತ್ತೊಯ್ಯುವ ದೃಶ್ಯ ಸಫಾರಿಗೆ ಹೋಗಿದ್ದ ಪ್ರವಾಸಿಗರ ಮೊಬೈಲ್ ನಲ್ಲಿ ಸೆರೆಯಾಗಿದೆ. ದೃಶ್ಯ ಕಂಡು ಪ್ರವಾಸಿಗರ ದಿಲ್ ಖುಷ್ ಆಗಿದ್ದಾರೆ.

