ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ಕಾಲೋನಿ ಸಮೀಪದ ಚೆಂಡುಮಲ್ಲಿಗೆ ಜಮೀನಿನಲ್ಲಿ ಗಾಯಗೊಂಡು ಆಶ್ರಯ ಪಡೆದಿದ್ದ ವ್ಯಾಘ್ರವನ್ನು ಅರಣ್ಯಾಧಿಕಾರಿಗಳು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಜಮೀನಿನಲ್ಲಿ ಹುಲಿಯನ್ನು ಕಂಡು ಗಾಬರಿಗೊಂಡಿದ್ದ ಯುವಕ ರಾಜೇಂದ್ರ ಸ್ಥಳೀಯರಿಗೆ ಮಾಹಿತಿ ನೀಡಿದ್ದರು.ಬಳಿಕ ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಲಾಯಿತು.
ಡ್ರೋನ್ ಕ್ಯಾಮೆರಾ ಮೂಲಕ ಹುಲಿಯ ಚಲನ-ವಲನ ಗಮನಿಸಿ ನಾಲ್ಕು ಗಂಟೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಗಾಯಗೊಂಡು ಮಲಗಿದ್ದ ವ್ಯಾಘ್ರನಿಗೆ ಅರವಳಿಕೆ ನೀಡಿ ಸುರಕ್ಷಿತವಾಗಿ ಸೆರೆಹಿಡಿಯಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಲಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ರವಾನಿಸಿದರು.

