ಗುಂಡ್ಲುಪೇಟೆ: ಹುಲಿ ದಾಳಿಗೆ ಕುರಿಗಾಹಿ ಮಹಿಳೆಯೊಬ್ಬಳು ಬಲಿಯಾಗಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಓಂಕಾರ್ ಅರಣ್ಯ ವಲಯಕ್ಕೆ ಸೇರಿದ ದೇಶಿಪುರ ಕಾಲೋನಿಯಲ್ಲಿ ನಡೆದಿದೆ.
ತಾಲೂಕಿನ ದೇಶಿಪುರ ಕಾಲೋನಿಯ ಹಾಡಿಯ ಪುಟ್ಟಮ್ಮ ಎಂಬ ಮಹಿಳೆ (36) ಹುಲಿ ದಾಳಿಗೆ ಬಲಿಯಾಗಿದ್ದಾರೆ. ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಕುರಿ ಮೇಯುಸಿತ್ತಿದ್ದ ಮಹಿಳೆಯ ಮೇಲೆರಗಿದ ಹುಲಿ ಕುತ್ತಿಗೆ ಮತ್ತು ಎದೆಭಾಗಕ್ಕೆ ಬಲವಾಗಿ ದಾಳಿ ನಡೆಸಿ ಕೊಂದುಹಾಕಿದೆ.
ಮಹಿಳೆಯನ್ನ ಅರಣ್ಯದೊಳಗೆ ಎಳೆದೊಯ್ದು ಕೂಗಳತೆ ದೂರದಲ್ಲೇ ಬಿಟ್ಟು ಹೋಗಿದೆ. ಗ್ರಾಮಸ್ತರು ಪುಟ್ಟಮ್ಮನಿಗಾಗಿ ಹುಡುಕಾಟ ನಡೆಸಿದ ವೇಳೆ ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳಕ್ಕೆ ಓಂಕಾರ್ ಅರಣ್ಯ ವಲಯದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

