ಗುಂಡ್ಲುಪೇಟೆ : ಅಚಾನಕ್ಕಾಗಿ ತನ್ನೆದುರಿಗೆ ಸಿಕ್ಕ ಪ್ರಾಣಿಗಳ ಮೇಲೆ ಏಕಾಏಕಿ ದಾಳಿ ನಡೆಸುವ ಹೆಬ್ಬುಲಿ ನೀಲದಂತದ ಆನೆಯನ್ನ ನೋಡಿ ಸೈಲೆಂಟಾಗಿ ಮಲಗಿದ ದೃಶ್ಯ ಬಂಡೀಪುರದಲ್ಲಿ ಸೆರೆಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ಲಾಗಿರುವ ದೃಶ್ಯವನ್ನ ಪ್ರವಾಸಿಗರೊಬ್ಬರು ತಮ್ಮ ಮೊಬೈಲ್ ಕ್ಯಾಮಾರದಲ್ಲಿ ಸೆರೆಹಿಡಿದಿದ್ದಾರೆ, ಅರಣ್ಯಕ್ಕೆ ಹೊಂದಿಕೊಂಡಂತಿರುವ ಪ್ರದೇಶದಿಂದ ಈ ಅದ್ಭುತ ಚಿತ್ರಣವನ್ನ ಸೆರೆಹಿಡಿಯಲಾಗಿದೆ ಎನ್ನಲಾಗುತ್ತಿದ್ದು ಸಾಕಷ್ಟು ವೀಕ್ಷಣೆ ಕಂಡಿದೆ.

