ಚಾಮರಾಜನಗರ : ಪ್ರವಾಸಿಗರ ಸಪಾರಿ ವಾಹನವನ್ನ ಸಲಗ ಹಿಮ್ಮೆಟ್ಟಿಸಿದ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಸಪಾರಿಯಲ್ಲಿ ನಡೆದಿದೆ.
ಇತ್ತೀಚಿಗೆ ಆರಂಭವಾದ ಎಂಎಂ ಹಿಲ್ಸ್ ಸಪಾರಿಯಲ್ಲಿ ವನ್ಯಪ್ರಾಣಿಗಳ ಕಲರವ ಹೆಚ್ಚಾಗತೊಡಗಿದ್ದು ಪ್ರವಾಸಿಗರಿಗೆ ಕಾಣ ಸಿಗುವ ಹುಲಿ, ಚಿರತೆ ಆನೆಗಳ ಹಿಂಡು ಇನ್ನಷ್ಟು ಮಂದಿ ಪ್ರವಾಸಿಗರನ್ನ ತನ್ನತ್ತ ಕೈ ಬೀಸಿ ಕರೆಯುತ್ತಿದೆ.
ಹುಲಿ ಸೈಟಿಂಗ್, ಸಪಾರಿ ವಾಹನಗಳನ್ನ ಆನೆ ಹಿಮ್ಮೆಟ್ಟಿಸುತ್ತಿದ್ದ ದೃಶ್ಯ ಬಂಡೀಪುರದಲ್ಲಿ ಕಾಣಸಿಗುತ್ತಿತು ಈಗ ಅಜ್ಜಿಪುರ ಸಪಾರಿಯಲ್ಲೂ ಇಂತಹ ದೃಶ್ಯಗಳು ಕಂಡುಬರುತ್ತಿವೆ.

