ಚಾಮರಾಜನಗರ: ಸಾಮಾಜಿಕ ಬಹಿಷ್ಕಾರ ಪಿಡುಗು ಜೀವಂತವಾಗಿರುವ ಘಟನೆ ಯಳಂದೂರು ತಾಲೂಕಿನ ಯರಿಯೂರು ಗ್ರಾಮದಲ್ಲಿ ನಡೆದಿದೆ. ಎರಡು ಕುಟುಂಬಗಳಿಗೆ ಬಹಿಷ್ಕಾರ ಹಾಕಿ ಕಿರುಕುಳ ಆರೋಪ ಕೇಳಿಬಂದಿದೆ.

ಪ್ರೀತಿಸಿ ಮದುವೆಯಾದದ್ದಕ್ಕೆ ದಂಡ ವಿಧಿಸಿದ್ದು, ದಂಡ ಪ್ರಶ್ನಿಸಿದ್ದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಪುಟ್ಟಸ್ವಾಮಿ ಹಾಗೂ ವಿನಾಯಕ ಎಂಬ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ.

3-4 ವರ್ಷಗಳಿಂದಲೂ‌ ಬಹಿಷ್ಕಾರಕ್ಕೆ ಒಳಗಾಗಿ ಕುಟುಂಬಗಳು ನರಕಯಾತನೆ ಅನುಭವಿಸುತ್ತಿದೆ. ಧಾರ್ಮಿಕ ಚಟುವಟಿಕೆಯಲ್ಲಿ ಭಾಗವಹಿಸುವಂತಿಲ್ಲ, ಇವರ ಮನೆ ಕಾರ್ಯಗಳಿಗೆ ಯಾರೂ ಬರುತ್ತಿಲ್ಲ. ಬಹಿಷ್ಕಾರ ತೆಗೆದುಹಾಕುವಂತೆ ಎಸ್ಪಿ ಡಾ.ಬಿ.ಟಿ.ಕವಿತಾಗೆ ಕುಟುಂಬಗಳು ಮೊರೆ ಹೋಗಿದೆ.

ಕ್ಷುಲ್ಲಕ ಕಾರಣಗಳಿಗೆ 1 ಲಕ್ಷ ದಂಡವನ್ನು ಗ್ರಾಮದ ಮುಖಂಡರು ವಿಧಿಸಿದ್ದಾರೆ. ದಂಡ ಕೊಡದಿದ್ದಕ್ಕೆ ಎರಡೂ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕುವಂತೆ ತಿಳಿಸಿದ್ದಾರೆ.