ಚಾಮರಾಜನಗರ : ತಾಳಿ ಕಟ್ಟಿದ ಮರುಕ್ಷಣವೇ ಹಸಮಣೆಯಿಂದ ನೇರವಾಗಿ ಪರೀಕ್ಷೆಗೆ ನವ ವಧು ಹಾಜರಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲೊಂದು ಅಪರೂಪದ ಪ್ರಸಂಗ ನಡೆದಿದೆ.

ನಂಜನಗೂಡು ತಾಲ್ಲೂಕಿನ ಸಿಂಧುವಳ್ಳಿ ಯೋಗೇಶ್ ಜೊತೆ ಕೊಳ್ಳೇಗಾಲದ ಆರ್ ಸಂಗೀತ ಅವರಿಗೆ ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ವಿವಾಹ ಮಹೋತ್ಸವ ನಡೆಯಿತು.

ವಾಸವಿ ಕಾಲೇಜಿನ ಅಂತಿಮ ಬಿ ಕಾಂ ವಿದ್ಯಾರ್ಥಿನಿ ಆರ್ ಸಂಗೀತ ತಾಳಿ ಕಟ್ಟುತ್ತಿದ್ದಂತೆ ಪರೀಕ್ಷೆಗೆ ತೆರಳಿದ್ದಾರೆ. ಮದುವೆ ಸಂಭ್ರಮದ ನಡುವೆ ಶಿಕ್ಷಣದ ಮಹತ್ವವನ್ನು ಯುವತಿ ಸಾರಿದ್ದಾರೆ.