ಗುಂಡ್ಲುಪೇಟೆ : ಕೆರೆಗೆ ನೀರು ಕುಡಿಯಲು ಬಂದ ಜಿಂಕೆಯನ್ನ ಸೀಳುನಾಯಿಗಳು ಬೇಟೆಯಾಡಿರುವ ಅಪರೂಪದ ದೃಶ್ಯವನ್ನ ಸ್ಥಳೀಯರೊಬ್ಬರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಕಣಿಯನಪುರ ಕಾಲೋನಿ ಸಮೀಪದ ಮಹದೇಶ್ವರ ದೇವಸ್ಥಾನದ ಬಳಿಯ ಕೆರೆಯಲ್ಲಿ ಭೇಟೆಯಾಡಿರುವ ದೃಶ್ಯ ಸೆರೆಯಾಗಿದೆ.
ನೀರನ್ನರಸಿ ಬಂದ ಜಿಂಕೆಯನ್ನ ಕಂಡ ಸೀಳು ನಾಯಿಗಳ ಹಿಂಡು ದಾಳಿ ನಡೆಸಿವೆ, ಜಿಂಕೆಯನ್ನ ಭೇಟೆಯಾಡಿದ್ದನ್ನ ಕಂಡ ಗ್ರಾಮದ ಬೀದಿನಾಯಿಗಳು ಕೆರೆ ಸಮೀಪ ಬಂದಂತ ವೇಳೆ ಅವುಗಳನ್ನ ಹಿಮ್ಮೆಟ್ಟಿಸಿದ ದೃಶ್ಯವು ಸಹ ಕ್ಯಾಮರಾದಲ್ಲಿ ಸೆರೆಯಾಗಿದೆ.

