ಚಾಮರಾಜನಗರ: ದಿನ ಕಳೆದಂತೆ ಕಾಡಾನೆಗಳ ಉಪಟಳ ಮಿತಿ ಮೀರುತ್ತಿದೆ. ಕಾಡು ಪ್ರಾಣಿ ಸಂಘರ್ಷಕ್ಕೆ ಗಡಿ ನಾಡ ಜನತೆ ರೋಸಿ ಹೋಗಿದ್ದಾರೆ. ಕಾಡಂಚಿನ ಗ್ರಾಮಸ್ಥರಿಗೆ ಕಾಡಾನೆ ಉಪಟಳದಿಂದ ಮುಕ್ತಿ ಕೊಡುವಂತೆ ಮನವಿ ಮಾಡುತ್ತಿದ್ದಾರೆ.

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲ್ಲಯ್ಯನ ಪುರ ಗ್ರಾಮದ ಚಂದ್ರಮ್ಮ ಮಲ್ಲಪ್ಪ ಗುರುಸಿದ್ದಪ್ಫನ ಜಮೀನುಗಳಿಗೆ ಕಾಡಾನೆಗಳ ಹಿಂಡು ಲಗ್ಗೆಯಿಟ್ಟಿದೆ. ಜಮೀನಿನ ತುಂಬಾ ಕಾಡನೆ ಒಡಾಟದ ಹೆಜ್ಜೆ ಗುರುತು ಪತ್ತೆಯಾಗಿದೆ.

ಮೆಕ್ಕೆಜೋಳ ಕಟಾವಿಗೆ ಬಂದಿದ್ದ ಬಾಳೆಯನನ್ನು ಗಜಪಡೆ ತಿಂದು ತೇಗಿದೆ. ಕಾಡಾನೆ ಉಪಟಳದಿಂದ ಮುಕ್ತಿ ಕೊಡಿಸುವಂತೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.