ಗುಂಡ್ಲುಪೇಟೆ : ತಾಲೂಕಿನ ಭೀಮನಬೀಡು ಗ್ರಾಮದಲ್ಲಿನ ಮೂರನೇ ವಾರ್ಡ್ ಸಂಪೂರ್ಣವಾಗಿ ಮೂಲಭೂತ ಸೌಕರ್ಯದಿಂದ ವಂಚಿತವಾಗಿದ್ದು ಗ್ರಾಮಪಂಚಾಯತಿ ಆಡಳಿತ ಮಂಡಳಿ ವಿರುದ್ಧ ರೈತ ಸಂಘ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ.

ಗ್ರಾಮಪಂಚಾಯತಿ ಕೂಗಳತೆ ಅಂತರದಲ್ಲೇ ಕಲುಷಿತ ವಾತಾವರಣ ಅವರಿಸಿರುವುದರಿಂದ 3 ನೇ ವಾರ್ಡಿನ ನಿವಾಸಿಗಳು ಸಾಂಕ್ರಾಮಿಕ ರೋಗದ ಭೀತಿಯನ್ನ ಎದುರಿಸುತ್ತಿದ್ದಾರೆ. ಸ್ಥಳೀಯರ ಸಮಸ್ಯೆ ಕುರಿತಾಗಿ ಗ್ರಾಮಪಂಚಾಯತಿಗೆ ಲಿಖಿತವಾಗಿ ಮನವಿ ಮಾಡಿ ಎರಡು ತಿಂಗಳು ಕಳೆದರೂ ಸಹ ಯಾವುದೇ ರೀತಿಯಾದ ಸ್ವಚ್ಛತಾ ಕಾರ್ಯ ಕೈಗೊಂಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಒಳಚರಂಡಿ ಸಂಪೂರ್ಣವಾಗಿ ತ್ಯಾಜ್ಯ ವಸ್ತುಗಳಿಂದ ತುಂಬಿ ಹೋಗಿದ್ದು ಅಶುಚಿತ್ವ ವಾತಾವರಣ ಜನರನ್ನ ಬೆಂಬಿಡದೆ ಕಾಡುತ್ತಿದೆ , ಚರಂಡಿ ಹೂಳೆತ್ತದೆ ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಸ್ಥಳೀಯರು ದಿನದೂಡಬೇಕಿದೆ ಎಂದು ರೈತ ಸಂಘ ಮುಖಂಡರು ಕಿಡಿಕಾರಿದ್ದಾರೆ.