ಗುಂಡ್ಲುಪೇಟೆ : ತಾಲೂಕಿನ 110 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಂಪೂರ್ಣವಾಗಿ ಹಳ್ಳಹಿಡಿದಿದೆ, ಕ್ಷೇತ್ರದಲ್ಲಿ ಅಂತರ್ಜಲ ಕುಸಿತಗೊಂಡು ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದೆ ಆದ್ರೆ ಸ್ಥಳೀಯ ಶಾಸಕರು ರೈತರ ಬಗ್ಗೆ ಉದಾಸೀನ ತೋರುತ್ತಿರುವುದು ಸರಿಯಲ್ಲ ಎಂದು ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಹೇಳಿದರು.
ಪಟ್ಟಣದ ಸಿಎಂಎಸ್ ಕಲಾಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣೆಯಲ್ಲಿ ಗೆದ್ದರೆ ಸಾಲದು ಗೆಲುವಿನ ಬಳಿಕ ಜವಬ್ದಾರಿಯನ್ನ ಅರಿಯಬೇಕಿದೆ, ಬಿಜೆಪಿ ಅಧಿಕಾರವಧಿಯಲ್ಲಿ ಸಾಕಷ್ಟು ಮಳೆಯಾಗಿತ್ತು ಆದರೂ ಕೆರೆತುಂಬಿಸುವ ಯೋಜನೆಗೆ ಯಾವುದೇ ತೊಡಕಾಗಿರಲಿಲ್ಲ ಆದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರೈತರ ಹಿತವನ್ನೇ ಮರೆತಿದ್ದಾರೆ ಎಂದು ಕಿಡಿಕಾರಿದರು.
ಶಾಸಕರ ಉದಾಸೀನತೆಯಿಂದ ರೈತರು ಬೆಳೆಗಳನ್ನ ಬೆಳೆಯಲು ಹಿಂದೇಟು ಹಾಕುವಂತ ಪರಿಸ್ಥಿತಿ ನಿರ್ಮಾಣವಾಗಿದೆ, ಗುಂಡ್ಲುಪೇಟೆ ಮಳೆಯಾಶ್ರಿತ ಪ್ರದೇಶವಾಗಿದ್ದ, ಸದ್ಯದ ಪರಿಸ್ಥಿತಿಯಲ್ಲಿ ನೀರಿಗಾಗಿ ಚಳುವಳಿಗೆ ಇಳಿಯಬೇಕಾಗಿದೆ, ಯಡಿಯೂರಪ್ಪ ಅವರ ಅವಧಿಯಲ್ಲಿ ನಮ್ಮ ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿದ್ರು,
ಬಳಿಕ ಬಂದಂತ ಸರ್ಕಾರ ಸಿದ್ದರಾಮಯ್ಯ ನೇತೃತ್ವದಲ್ಲಿ ಮುಂದುವರಿದ ಒಂದಷ್ಟು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿದ್ರು, ಯೋಜನೆ ಜಾರಿಯಾದ್ರೆ ಸಾಲದು ಫಲಪ್ರದವಾಗಬೇಕು ಅದನ್ನ ಶಾಸಕರು ಮರೆತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

