ಗುಂಡ್ಲುಪೇಟೆ : ಆರು ತಿಂಗಳ ಮಗುವಿಗೆ ಅನಸ್ತೇಷಿಯಾ ನೀಡಿದ ನಂತರ  ಸಾವನ್ನಪ್ಪಿ ಏಳು ತಿಂಗಳು ಕಳೆದರು ತಪ್ಪಿತಸ್ಥ ಡಾಕ್ಟರ್ ಮೇಲೆ ಕ್ರಮಕೈಗೊಳ್ಳಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಮೀನಾವೇಷ ಎಣಿಸುತ್ತಿರುವುದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗತೊಡಗಿದೆ.

ತಾಲ್ಲೂಕಿನ ಬೊಮ್ಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿಗದಿಗಿಂತ ಹೆಚ್ಚಿನ ಪ್ರಮಾಣದ ಅರಿವಳಿಕೆ (ಅನಸ್ತೇಷಿಯಾ) ಮದ್ದು ನೀಡಿದ ಪರಿಣಾಮ 6 ತಿಂಗಳ ಗಂಡು ಮಗು ಮೃತಪಟ್ಟಿತ್ತು. ತಾಲ್ಲೂಕಿನ ಹಂಗಳ ಗ್ರಾಮದ ಆನಂದ್-ಶುಭ ದಂಪತಿ ಪುತ್ರನ ಕಿವಿ ಚುಚ್ಚಿಸಲು ಬೊಮ್ಮಲಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು.

ಅಲ್ಲಿನ ವೈದ್ಯ ನಾಗರಾಜ್‌ ಮಗುವಿನ ಎರಡೂ ಕಿವಿಗಳಿಗೆ ಅರಿವಳಿಕೆ ಚುಚ್ಚುಮದ್ದು ನೀಡಿದಾಗ ಮಗು ಪ್ರಜ್ಞಾಹೀನ ಸ್ಥಿತಿಗೆ ತಲುಪಿದೆ. ಹೆಚ್ಚಿನ ಚಿಕಿತ್ಸೆಗೆ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮಗು ಮೃತಪಟ್ಟಿರುವುದಾಗಿ ಖಾತ್ರಿಯಾಗಿದೆ, ಮಗುವಿನ ಸಾವಿಗೆ ಅರಿವಳಿಕೆ ಚುಚ್ಚುಮದ್ದು ನೀಡಿದ ವೈದ್ಯರು ಕಾರಣವಾಗಿತ್ತು ಇದಕ್ಕೆ ಎಫ್ ಎಸ್ ಎಲ್ ವರದಿ ಪುಷ್ಟಿ ನೀಡಿದೆ.

ಈಗಾಗಲೇ ಎಫ್.ಎಸ್‌.ಎಲ್ ವರದಿಯಲ್ಲಿ  ಲಿಡೋಕೇಯ್ನ್  ಸಾಬೀತಾಗಿದ್ದರು ಪೊಲೀಸ್ ಡಾ.ನಾಗರಾಜು ಮೇಲೆ ಎಫ್.ಐ.ಆರ್. ದಾಖಲಿಸಲು ಮುಂದಾಗಿಲ್ಲ ಇದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಮಗು ಕಳೆದಕೊಂಡ ಪೋಷಕರು ಪ್ರತಿನಿತ್ಯ ಸ್ದಳೀಯ ಪೋಲಿಸ್ ಠಾಣೆಗೆ ಭೇಟಿ ಡಾಕ್ಟರ್ ಮೇಲೆ ಕ್ರಮಕೈಗೊಳ್ಳುವ ಬೇಡಿಕೊಂಡಿರುವ ಪ್ರಸಂಗ ನಡೆದಿದೆ ಸ್ದಳೀಯ ಪೋಲಿಸರಿಗೆ ಕಿವುಡರಾಗಿದ್ದಾರೆ ಎಂಬ ಅಪವಾದಕ್ಕೆ ಕೈಗನ್ನಡಿಯಾಗಿದೆ ಎನ್ನಬಹುದಾಗಿದೆ.

ಮಗುವಿನ ತಂದೆ ಆನಂದ್ ಪೋಲಿಸ್ ವಿಚಾರಿಸಿದಾಗ ಎಫ್.ಎಸ್.ಎಲ್ ವರದಿ ಬಂದಿಲ್ಲ ಎಂದು ಕಾಲಹರಣಮಾಡುತ್ತಿದ್ದಾರೆ ಎಂದು  ಅನುಮಾನಗೊಂಡು  ಆರ್.ಟಿ.ಐ ಅಡಿಯಲ್ಲಿ ಮಾಹಿತಿ ಪಡೆದುಕೊಂಡಾಗ ಮಾರ್ಚ್ ತಿಂಗಳಲ್ಲಿ ಎಫ್.ಎಸ್.ಎಲ್ ವರದಿ ಬಂದಿರುವುದು ಬಹಿರಂಗಗೊಂಡಿದೆ ಆದರೆ ಪೊಲೀಸರ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.