ಗುಂಡ್ಲುಪೇಟೆ : ಬಂಡೀಪುರದ ರಾಂಪುರ ಆನೆ ಶಿಬಿರಕ್ಕೆ ಯುವಕರ ಅಕ್ರಮ ಪ್ರವೇಶ ಮಾಡಿದ್ದಲ್ಲದೆ ಆನೆಗಳ ಜೊತೆಗೆ ಫೋಟೋಶೂಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ರಾಂಪುರ ಆನೆ ಶಿಬಿರದಲ್ಲಿನ ಸಾಕಾನೆಗಳ ಜೊತೆ ಪೋಟೊ ಶೂಟ್ ಮಾಡಿಸಿಕೊಂಡಿರುವ ಇಬ್ಬರು ಯುವಕರು ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳನ್ನ ಹಂಚಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ
ಹುಲಿ ಸಂರಕ್ಷಿತಾ ಅರಣ್ಯಕ್ಕೆ ಯುವಕರು ಪ್ರವೇಶಿಸಿದ್ದಾದರು ಹೇಗೆ ಎಂದು ಜೋಸೆಫ್ ಹೂವರ್ ಪ್ರಶ್ನಿಸಿದ್ದಾರೆ, ಕೂಡಲೇ ಯುವಕರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

