ಚಾಮರಾಜನಗರ : ಕರ್ನಾಟಕ ತಮಿಳುನಾಡು ಸಂಪರ್ಕದ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಳನೀರು ತುಂಬಿದ್ದ ಲಾರಿ ಅಪಘಾತವಾದ ಘಟನೆ ನಡೆದಿದೆ.

ತಮಿಳುನಾಡು ಕರ್ನಾಟಕ ಗಡಿಯಲ್ಲಿನ ಕಾರ್ಯಪಾಳ್ಯ ವಾಹನ ತಪಾಸಣಾ ಕೇಂದ್ರದ ಬಳಿ ತಮಿಳುನಾಡಿನ ಸತ್ಯಮಂಗಲಂ ದಿಂದ ಚಾಮರಾಜನಗರ ಕಡೆಗೆ ಬರುತ್ತಿದ್ದ ಎಳನೀರು ತುಂಬಿದ ಲಾರಿ ಅಪಘಾತಕ್ಕೀಡಾಗಿದೆ. ಲಾರಿಯಲ್ಲಿದ್ದ ಎಳೆನೀರನ್ನ ಸಾರ್ವಜನಿಕರು ತುಂಬಿ ಸಾಗಿಸಿದ್ದಾರೆ.

ತಮಿಳುನಾಡಿನ ಈರೋಡು ಜಿಲ್ಲೆ ಸತ್ಯಮಂಗಲಂ ದಿಂದ ಕರ್ನಾಟಕ ರಾಜ್ಯ ಚಾಮರಾಜನಗರಕ್ಕೆ ಸುಮಾರು 2000 ಕ್ಕೂ ಹೆಚ್ಚು ಇಳನೀರು ಏರಿಸಿ ಹೋದ ಲಾರಿ ಹಾಸನೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದು ನಿಂತಿತ್ತು.

ಆಗ ತಮಿಳು ಗಡಿ ಕರ್ನಾಟಕದಲ್ಲಿ ಕಾರ್ಯಪಾಳ್ಯ ಬಳಿ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣವನ್ನು ಕಳೆದುಕೊಂಡು ಅಪಘಾತಕ್ಕೊಳಗಾಗಿದೆ. ಈ ಅಪಘಾತದ ಚಾಲಕ ಸಣ್ಣ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೇಲಾಗಿ ಲಾರಿಯಲ್ಲಿ 2000ಕ್ಕೂ ಹೆಚ್ಚು ಎಳನೀರು ರಸ್ತೆಯಲ್ಲಿ ಚೆದುರಿ ಬಿದ್ದಿದೆ.ಈ ಅಪಘಾತದ ಕಾರಣ ಅಭಾಗದಲ್ಲಿ ಸ್ವಲ್ಪ ಸಮಯ ಸಂಚಾರಕ್ಕೆ ತೊಂದರೆಯಾಯಿತು. ಅಲ್ಲೇ ಬರುತ್ತಿದ್ದ ಸಾರ್ವಜನಿಕರು ಅಪಘಾತಕ್ಕೀಡಾದ ಲಾರಿಯಲ್ಲಿ ಚೆಲ್ಲಿದ ಎಳನೀರುಗಳನ್ನು ಹೊತ್ತೊಯ್ದರು.