ಗುಂಡ್ಲುಪೇಟೆ: ಕಳೆದ ಗುರುವಾರ ಮಹಿಳೆಯನ್ನು ಕೊಂದು ಹಾಕಿದ್ದ ಹುಲಿ ಸೆರೆಗೆ ಅರಣ್ಯ ಇಲಾಖೆ ಕೂಂಬಿಂಗ್ ನಡೆಸುತ್ತಿದ್ದು, ಶನಿವಾರ ಎರಡನೇ ದಿನವೂ ಸುಳಿವು ಸಿಕ್ಕಿಲ್ಲ.

ಗುಂಡ್ಲುಪೇಟೆ ತಾಲೂಕಿನ ದೇಶಿಪುರ ಕಾಲೊನಿಯ ಮಹಿಳೆ ಮೇಲೆ ದಾಳಿ ನಡೆಸಿದ್ದ ಹುಲಿ ಸೆರೆಗೆ ಅರಣ್ಯ ಇಲಾಖೆ ಶುಕ್ರವಾರದಿಂದಲೇ ಕೂಂಬಿಂಗ್ ನಡೆಸುತ್ತಿದೆ. ಬೇಟೆಯಾಡಿದ ಜಾಗಕ್ಕೆ ಮತ್ತೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಅದೇ ಜಾಗದಲ್ಲಿ ಬೋನ್ ಕೂಡ ಇರಿಸಲಾಗಿದೆ.

ಎಸಿಎಫ್ ಹಾಗೂ ಓಂಕಾರ್ ವಲಯ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಓರ್ವ ಡಿಆರ್​ಎಫ್ಒ, ಇಬ್ಬರು ಬೀಟ್ ಫಾರೆಸ್ಟರ್, 11 ಮಂದಿ ವಾಚರ್, ಎಲಿಫ್ಯಾಂಟ್ ಟಾಸ್ಕ್ ಫೋರ್ಸ್‌ನ ಐವರು, ಎಸ್​ಟಿಪಿಎಫ್​ನ 12 ಮಂದಿ ಹುಲಿ ಸೆರೆ ತಂಡದಲ್ಲಿದ್ದಾರೆ.