ಚಾಮರಾಜನಗರ : ಹದಿನೈದು ದಿನದ ನವಜಾತ ಶಿಶುವನ್ನ ತಾಯಿಯೊಬ್ಬಳು ರಸ್ತೆಯಲ್ಲಿ ಬೀಸಾಕಿ ಹೋಗಿರುವ ಘಟನೆ ಚಾಮರಾಜನಗರ ತಾಲೂಕಿನ ತಮ್ಮಡಹಳ್ಳಿ ಸಾಗಡೆ ಗ್ರಾಮದ ಬಳಿ ನಡೆದಿದೆ.
ಹತ್ತರಿಂದ ಹದಿನೈದು ದಿನಗಳ ಹೆಣ್ಣು ಶಿಶುವನ್ನ ರಸ್ತೆ ಬದಿಯಲ್ಲಿ ಪಂಚೆಯಲ್ಲಿ ಸುತ್ತಿಟ್ಟು ಕಡುಪಾಪಿ ತಾಯಿ ಪರಾರಿಯಾಗಿದ್ದಾಳೆ, ಚಾಮರಾಜನಗರ ತಾಲೂಕಿನ ತಮ್ಮಡಹಳ್ಳಿ ಸಾಗಡೆ ಗ್ರಾಮದ ರಸ್ತೆಬದಿಯಲ್ಲಿ ಪಂಚೆ ಸುತ್ತಿಟ್ಟಿದ್ದ ಮಗುವನ್ನ ಗಮನಿಸಿದ ಸ್ಥಳೀಯರು ಸಾಗಡೆ ಗ್ರಾಮದ ಪ್ರಾಥಮಿಕ ಉಪ ಕೇಂದ್ರಕ್ಕೆ ಕರೆದೊಯ್ದು ಶ್ರಶೂಷೆ ಮಾಡಿಸಿದ್ದು ಮಗುವಿನ ರಕ್ಷಣೆ ಮಾಡಲಾಗಿದೆ.

