ಗುಂಡ್ಲುಪೇಟೆ : ಚಾಮರಾಜನಗರ ಜಿಲ್ಲೆ ಮಾದಪ್ಪನ ಸನ್ನಿಧಿಯಲ್ಲಿ ಐದು ಹುಲಿಗಳಿಗೆ ವಿಷವಿತ್ತ ಪ್ರಕರಣ ಮಾಸುವ ಮುನ್ನವೇ 25 ಕ್ಕೂ ಹೆಚ್ಚು ಕೋತಿಗಳಿಗೆ ವಿಷವಿಟ್ಟು ದಾರುಣವಾಗಿ ಹತ್ಯೆಗೈದಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಗುಂಡ್ಲುಪೇಟೆ ಬಫರ್ ಜೋನ್ ವಲಯದ ಕಂದೇಗಾಲ ಗ್ರಾಮದ ಸಮೀಪ ನಡೆದಿದೆ.

ತಾಲೂಕಿನ ಕಂದೇಗಾಲದ ಪಾರ್ವತಿ ಬೆಟ್ಟದ ರಸ್ತೆ ಬದಿಯಲ್ಲಿ ಗೋಣಿ ಚೀಲದಲ್ಲಿ ತುಂಬಿ ಬೀಸಾಡಿ ಹೋಗಿರುವ ಕೃತ್ಯ ಸ್ಥಳೀಯರಿಂದ ಬೆಳಕಿದೆ ಬಂದಿದೆ. ಮುಂಜಾನೆ ದಾರಿಹೋಕರು ಚೀಲದಲ್ಲಿ ಒದ್ದಾಡುವುದನ್ನ ಗಮನಿಸಿ ತೆರೆದಾಗ ಕೋತಿಗಳ ಮಾರಣ ಹೋಮ ಗೊತ್ತಾಗಿದೆ, ತಕ್ಷಣವೇ ಅರಣ್ಯ ಇಲಾಖೆ ಮಾಹಿತಿ ನೀಡಿದ ಸ್ಥಳೀಯರು ಘಟನೆ ಕುರಿತು ವಿವರಿಸಿದ್ದಾರೆ,

ಬದುಕುಳಿದ ಎರಡು ಕೋತಿಗಳನ್ನ ಸಂತೈಸಿದ ಸ್ಥಳೀಯರು ಹತ್ಯೆಗೈದವರ ವಿರುದ್ಧ ಕಾನೂನು ಕ್ರಮಕ್ಕಾಗಿ ಆಗ್ರಹಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.