ಚಾಮರಾಜನಗರ: ಕಸಾಯಿ ಖಾನೆಗೆ ಸಾಗಿಸುತ್ತಿದ್ದ ಸುಮಾರು ಹತ್ತಕ್ಕೂ ಹೆಚ್ಚು ಎಮ್ಮೆಗಳ ರಕ್ಷಣೆ ಮಾಡಿರುವ ಘಟನೆ ಚಾಮರಾಜನಗರ ತಾಲ್ಲೂಕಿನ ಬಂಡಿಗೆರೆ ಬಳಿ ಬುಧವಾರ ನಡೆದಿದೆ.

ಚಾಮರಾಜನಗರ ಮಾರ್ಗದಿಂದ ಕ್ಯಾಂಟರ್ ನಲ್ಲಿ ತಮಿಳುನಾಡಿಗೆ ಎಮ್ಮೆಗಳ ಸಾಗಾಟ ಮಾಡುತ್ತಿದ್ದರು ಈ ಖಚಿತ ಮಾಹಿತಿ ಮೇರೆಗೆ ಹಿಂದೂ ರಾಷ್ಟ್ರ ರಕ್ಷಣಾಪಡೆಯ ಕಾರ್ಯಕರ್ತರು ವಾಹನವನ್ನು ತಡೆದು ಪೊಲೀಸರಿಗೆ ಕಸಾಯಿ ಖಾನೆ ಕ್ಯಾಂಟರ್ ನಲ್ಲಿದ್ದ ಎಮ್ಮೆಗಳನ್ನು ಒಪ್ಪಿಸಿದ್ದಾರೆ.

ಸ್ಥಳಕ್ಕೆ ಚಾಮರಾಜನಗರ ಪೂರ್ವ ಠಾಣೆ ಪೊಲೀಸರು ಭೇಟಿ ನೀಡಿ ಕ್ಯಾಂಟರ್ ಮತ್ತು 10 ಕ್ಕೂ ಅಧಿಕ ಎಮ್ಮೆಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.