ಚಾಮರಾಜನಗರ : ಕಾವೇರಿ ನದಿಯಲ್ಲಿ ಈಜಲು ವೈದ್ಯಕೀಯ ವಿದ್ಯಾರ್ಥಿಗಳು ಹೋಗಿದ್ದು, ನಾಲ್ವರಲ್ಲಿ ಒಬ್ಬ ನೀರು ಪಾಲು, ಮೂವರು ಬಚಾವ್ ಆಗಿರುವ ಘಟನೆ ಚಾಮರಾಜನಗರದ ಶಿವನಸಮುದ್ರದ ದರ್ಗಾದ ಹಿಂಭಾಗದ ಕಾವೇರಿ ನದಿಯಲ್ಲಿ ನಡೆದಿದೆ.
ಅಗ್ನಿಶಾಮಕ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಸಿದ್ದು, ನಾಪತ್ತೆಯಾಗಿರುವ ವಿದ್ಯಾರ್ಥಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಬೆಂಗಳೂರು ಮೂಲದ ದಯಾನಂದ ಸಾಗರ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು. ಶಿವನ ಸಮುದ್ರಕ್ಕೆ ಪ್ರವಾಸಕ್ಕೆ ಏಳು ಮಂದಿ ವಿದ್ಯಾರ್ಥಿಗಳು ಬಂದಿದ್ದರು.
ಈ ವೇಳೆ ನದಿಯಲ್ಲಿ ಈಜಲು ನಾಲ್ವರು ವಿದ್ಯಾರ್ಥಿಗಳು ಇಳಿದಿದ್ದರು. ನೀರಿನ ರಭಸಕ್ಕೆ ಈಜಲಾಗದೆ ವಿದ್ಯಾರ್ಥಿಗಳು ಪರದಾಡಿದ್ದಾರೆ. ಸ್ಥಳಕ್ಕೆ ಕೊಳ್ಳೇಗಾಲ ಅಗ್ನಿಶಾಮಕ ಠಾಣಾಧಿಕಾರಿ ಅರುಣ್ ಕುಮಾರ್ ನೇತೃತ್ವದ ತಂಡ ಆಗಮಿಸಿದೆ.
ಪ್ರಫುಲ್ಲ, ತುಷಾರಾ ಮತ್ತು ಪ್ರಮೋದ್ ಎಂಬ ಮೂವರನ್ನ ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ನಂದಕುಮಾರ್ ಎಂಬ ವಿದ್ಯಾರ್ಥಿ ನಾಪತ್ತೆಯಾಗಿದ್ದಾನೆ. ನಂದಕುಮಾರ್ ಪತ್ತೆಗಾಗಿ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ಮುಂದುವರಿದಿದೆ.

