ಚಾಮರಾಜನಗರ: ಪರಿಚಯವೇ ಇಲ್ಲದವರ ಮನೆ ಮೇಲೆ ಹತ್ತಿದ್ದ ಯುವಕ ವಿದ್ಯುತ್ ಶಾಕ್ ನಿಂದ ಅಸುನೀಗಿದ ಘಟನೆ ಯಳಂದೂರು ತಾಲೂಕಿನ ಅಂಬಳೆ ಗ್ರಾಮದಲ್ಲಿ ನಡೆದಿದೆ.
ಯಳಂದೂರು ತಾಲೂಕಿನ ಕಂದಹಳ್ಳಿ ಗ್ರಾಮದ ನಾಗರಾಜು(28) ಮೃತ ದುರ್ದೈವಿ. ಯಾವುದೋ ಸಮಯದಲ್ಲಿ ನಾಗರಾಜು ಅಂಬಳೆ ಗ್ರಾಮದ ಲಿಂಗಣ್ಣ ಎಂಬುವವರ ಮನೆಯ ಮೇಲೆ ಹತ್ತಿದ್ದಾನೆ. ಮನೆ ಮೇಲೆ ಹಾದುಹೋಗಿದ್ದ ವಿದ್ಯುತ್ ವೈರ್ ನಿಂದ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತ ನಾಗರಾಜು ಮದ್ಯ ವ್ಯಸನಿಯಾಗಿದ್ದು ಕುಡಿತದ ನಶೆಯಲ್ಲಿ ಅಪಾಯ ತಂದುಕೊಂಡಿದ್ದಾನೆ ಎನ್ನಲಾಗಿದೆ. ಸದ್ಯ, ಯಳಂದೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಮುಂದಿನ ತನಿಖೆ ಕೈಗೊಂಡಿದ್ದಾರೆ.

