ಚಾಮರಾಜನಗರ: ಚೆಲುವಾಂಬ ಆಸ್ಪತ್ರೆ ಆವರಣದಲ್ಲಿ ವ್ಯಕ್ತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಚೆಲುವಾಂಬ ಆಸ್ಪತ್ರೆಯ ಅಧೀಕ್ಷಕಿ ಸುಧಾ ಪ್ರತಿಕ್ರಿಯೆ ನೀಡಿದ್ದಾರೆ.
ಸೀರಿಯಸ್ ಕೇಸ್ ಎಂದು ಚಾಮರಾಜನಗರ ಜಿಲ್ಲಾಸ್ಪತ್ರೆಯಿಂದ ಚೆಲುವಾಂಬ ಆಸ್ಪತ್ರೆಗೆ ಶುಕ್ರವಾರ ಹೆಂಡತಿಯನ್ನು ಕರೆ ತಂದಿದ್ರು ಡಾಮೆಂಟರಿ ಇದ್ದರೂ ಅವರು ಆಸ್ಪತ್ರೆ ಆವರಣದಲ್ಲಿ ಮಲಗಿದ್ರು, ಗುಂಡ್ಲುಪೇಟೆ ಮೂಲದ ನಾಗೇಶ್ ಮಲಗಿದ್ದಲ್ಲೇ ಸಾವನ್ನಪ್ಪಿದ್ದಾರೆ.
ಈಗ ನಾವು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಪೊಲೀಸರು ಈಗ ಎಲ್ಲಾ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈಗಿರುವ ಡಾರ್ಮೆಂಟರಿಯಲ್ಲಿ ಬಡವರಿಗೆ ಬಿಪಿಎಲ್ ಕಾರ್ಡ್ ಇರುವವರಿಗೆ ಉಚಿತವಾಗಿ ತಂಗಲು ಅವಕಾಶ ಮಾಡಿಕೊಡುತ್ತೇವೆ.
ಬಿಪಿಎಲ್ ಕಾರ್ಡ್ ಇಲ್ಲದವರಿಗೆ 30 ರೂ. ಚಾರ್ಚ್ ಮಾಡುತ್ತೇವೆ. ಹೆಚ್ಚಿನ ಜನ ಹೊರಗಡೆ ಮಲಗುತ್ತಾರೆ, ಈ ವೇಳೆ ಘಟನೆ ನಡೆದಿದೆ . ಗುಂಡ್ಲುಪೇಟೆ ಮೂಲದ ನಾಗೇಶ್ ಸಾವಿಗೆ ನಿಖರ ಕಾರಣ ಗೊತ್ತಿಲ್ಲ ಪೋಸ್ಟ್ ಮಾರ್ಟಮ್ ಬಳಿಕ ಸಾವಿನ ನಿಖರ ಕಾರಣ ಗೊತ್ತಾಗಲಿದೆ ಎಂದು ಮೈಸೂರಿನ ಚೆಲುವಾಂಬ ಆಸ್ಪತ್ರೆಯ ಅಧೀಕ್ಷಕಿ ಸುಧಾ ಹೇಳಿಕೆ ನೀಡಿದರು.

