ಗುಂಡ್ಲುಪೇಟೆ: ಕಗ್ಗತ್ತಲಲ್ಲಿ ಮದ್ದೂರು ಚೆಕ್ಪೋಸ್ಟ್ ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಸಂಜೆ 8 ಗಂಟೆಯಾದ್ರೆ ಇಲ್ಲಿ ದೀಪದ ವ್ಯವಸ್ಥೆಯಿಲ್ಲ, ಅಧಿಕಾರಿಗಳಿಗೆ ಜವಾಬ್ದಾರಿ ಇಲ್ಲ. ತಪಾಸಣೆ ಕೇಂದ್ರದಲ್ಲೇ ಕತ್ತಲೇ ಆವರಿಸಿದ್ರೆ ವಾಹನಗಳ ಮೇಲೆ ನಿಗಾ ಇರಿಸೋದೇಗೆ ? ಎಂದು ಕಸ್ತೂರಿ ಕರ್ನಾಟಕ ನ್ಯಾಯಪರ ವೇದಿಕೆ ತಾಲೂಕು ಅಧ್ಯಕ್ಷ ರಂಗಪ್ಪ ನಾಯಕ್ ಕಿಡಿಕಾರಿದರು.
ಲಕ್ಷಾಂತರ ರೂ ಹಣ ವಸೂಲಿಯಾದ್ರು ಅಗತ್ಯ ಸೌಕರ್ಯ ಕಲ್ಪಿಸಲು ಮೀನಾಮೇಷ ಎನಿಸುತ್ತಿದ್ದಾರೆ. ಗಡಿಪ್ರವೇಶಿಸುವ ವಾಹನಗಳಿಗೆ ಹಸಿರು ಶುಲ್ಕ ವಸೂಲಿ ಮಾಡಿದ್ರು ಮೂಲ ಸೌಕರ್ಯ ಒದಗಿಸುವಲ್ಲಿ ವಿಫಲವಾಗಿದೆ.
ಗಡಿದಾಟುವ ವಾಹನಗಳ ತಪಾಸಣೆ ನಡೆಯೋದಿಲ್ಲ, ಕಗ್ಗತ್ತಲಲ್ಲಿ ಸಿಬ್ಬಂದಿಗಳ ಕೆಲಸ ನಡೆಯುತ್ತದೆ. ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಮದ್ದೂರು ವಲಯದಲ್ಲಿ ಅವ್ಯವಸ್ಥೆ ಎದ್ದು ಕಾಣುತ್ತಿದೆ. ಸಂಜೆ ವೇಳೆ ಬಾರ್ಡರ್ ದಾಟಲು ವಾಹನಗಳು ತರಾತುರಿಯಲ್ಲಿ ಹೋಗುತ್ತದೆ.
9 ಗಂಟೆ ನಂತರ ಸಂಚಾರಕ್ಕೆ ಅನುಮತಿಯಿಲ್ಲದ ಹಿನ್ನೆಲೆ ಸಾಲು ಸಾಲು ವಾಹನಗಳ ದಟ್ಟಣೆ ಇರುತ್ತದೆ. ಸಮಸ್ಯೆಗಳ ಪರಿಹಾರಕ್ಕೆ ಸೂಚನೆ ನೀಡದೆ ಬಂಡೀಪುರ ಸಿಎಫ್ ಪ್ರಭಾಕರನ್ ಮೌನವಾಗಿದ್ದಾರೆ.

