ಗುಂಡ್ಲುಪೇಟೆ : ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಜಾಗದ ವಿಚಾರಕ್ಕಾಗಿ ಮಾತಿಗೆ ಮಾತು ಬೆಳೆದು ವ್ಯಕ್ತಿಯೊಬ್ಬರ ಮೇಲೆ ಮಚ್ಚು ಬೀಸಿದ ಘಟನೆ ನಡೆದಿದೆ. ಘಟನಾ ಸಂಬಂದ ಮಚ್ಚಿನಿಂದ ಹಲ್ಲೆ ಮಾಡಿದ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು ಆರೋಪಿ ತಲೆ ಮರೆಸಿಕೊಂಡಿದ್ದಾನೆ, ಸದ್ಯ ಲಾಂಗ್ ಬೀಸಿದ ಆರೋಪಿಗಾಗಿ ಗುಂಡ್ಲುಪೇಟೆ ಪೋಲೀಸರು ತಲಾಶ್ ನಡೆಸುತ್ತಿದ್ದಾರೆ.

ಬೆಟ್ಟಹಳ್ಳಿ ಗ್ರಾಮದ ಮಲ್ಲು ಅಲಿಯಾಸ್ ಲಾಂಗ್ ಮಲ್ಲು ಎಂಬಾತನೇ ಆರೋಪಿಯಾಗಿದ್ದು ಮನೆಯ ಸಮೀಪದ ತುಂಡು ಜಾಗಕ್ಕಾಗಿ ಸಿದ್ದರಾಜೇಗೌಡ ಎಂಬಾತನ ಜೊತೆ ಗಲಾಟೆ ಮಾಡಿಕೊಂಡಿದ್ದ, ಒಂದು ಗುಂಟೆ ಜಾಗಕ್ಕಾಗಿ ಇಬ್ಬರ ನಡುವೆಯೂ ಮುಸುಕಿನ ಗುದ್ದಾಟ ನಡೆಯುತ್ತಿತ್ತು ಎನ್ನಲಾಗಿದೆ.

ಆದರೆ ಕಳೆದ ತಿಂಗಳ 27 ರ ಸಂಜೆ  ಆರೋಪಿ ಮಲ್ಲು ಸಿದ್ದರಾಜೇಗೌಡ ಮನೆ ಬಳಿ ಬಂದು ಜಾಗ ತನ್ನದೆಂದು ಖ್ಯಾತೆ ತೆಗೆದಿದ್ದ ಎನ್ನಲಾಗಿದೆ, ಇದೆ ವೇಳೆ ಇಬ್ಬರ ನಡುವೆ ವಾಗ್ವಿದ್ದ ತಾರಕ್ಕೇರಿದ ಸಂಧರ್ಭದಲ್ಲಿ ಮಲ್ಲು ಲಾಂಗ್ ನಿಂದ ಹಲ್ಲೇ ನಡೆಸಿ ಪರಾರಿಯಾಗಿದ್ದಾನೆ.  ಹಲ್ಲೆಗೊಳಗಾದ ಸಿದ್ದರಾಜೇಗೌಡ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಆರೋಪಿ ಲಾಂಗ್ ಮಲ್ಲುವಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.