ಗುಂಡ್ಲುಪೇಟೆ : ಪಡೆದಿದ್ದ ಸಾಲವನ್ನ ಸಮಯಕ್ಕೆ ಸರಿಯಾಗಿ ಮರುಪಾವತಿಸುತ್ತಿಲ್ಲ ಎಂದು ಖಾಸಗಿ ಫೈನಾನ್ಸ್ ಸಂಸ್ಥೆಯೊಂದು ಮನೆಗೆ ಭೀಗ ಜಡಿದು ನೋಟೀಸ್ ಅಂಟಿಸಿದ್ದು ಫೈನಾನ್ಸ್ ಸಂಸ್ಥೆಯ ನಡೆಯಿಂದ ಬಡ ರೈತ ಕುಟುಂಬ ಭೀದಿಗೆ ಬಿದ್ದಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕಗ್ಗಳದಹುಂಡಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಕಗ್ಗಳದಹುಂಡಿ ಗ್ರಾಮದ ಜಹುರ್ ಅಹಮದ್ ಎಂಬವರು ಖಾಸಗಿ ಫೈನಾನ್ಸ್ ಸಂಸ್ಥೆ ಜನಬ್ಯಾಂಕಿನಿಂದ 450000.00 ರೂ ಗೃಹ ಸಾಲ ಪಡೆದು 72 ತಿಂಗಳ ಅವಧಿಗೆ ಮಾಸಿಕ ಕಂತುಗಳನ್ನ ಪಾವತಿ ಮಾಡುವ ಷರತ್ತುಗಳಿಗೆ ಬದ್ಧರಾಗಿ ತಿಂಗಳಿಗೆ 11200.00 ರೂ ಗಳನ್ನ ಪಾವತಿ ಮಾಡಿದ್ದಾರೆ ಆದರೆ ಕುಟುಂಬ ಸದಸ್ಯರೋರ್ವರಿಗೆ ಅಪಘಾತವಾದ ಸಂದರ್ಭದಲ್ಲಿ ಪಡೆದ ಸಾಲದ ಮರುಪಾವತಿ ಮಾಡಲು ವಿಳಂಬವಾದ ಹಿನ್ನೆಲೆ ನ್ಯಾಯಾಲಯದ ಅನುಮತಿ ಪಡೆದು ಪೊಲೀಸ್ ಬಂದೋಬಸ್ತ್ ನೊಂದಿಗೆ ರೈತನ ಮನೆಗೆ ಭೀಗ ಜಡಿದು ಕುಟುಂಬಸ್ತರನ್ನ ಹೊರಹಾಕಲಾಗಿದೆ ಎಂದು ಸಂತ್ರಸ್ತ ಜಹುರ್ ಅಹಮದ್ ನೋವು ತೋಡಿಕೊಂಡಿದ್ದಾರೆ.
ಸಾಲಮರುಪಾವತಿ ವಿಳಂಭವಾದ ಬಳಿಕ ಯಾವುದೇ ರೀತಿಯ ನೋಟೀಸನ್ನ ಜಾರಿ ಮಾಡದ ಫೈನಾನ್ಸ್ ಸಂಸ್ಥೆ ಏಕಾಏಕಿ ಮನೆಗೆ ಭೀಗ ಹಾಕುವ ಮೂಲಕ ರೈತ ಕುಟುಂಬವನ್ನ ಬೀದಿ ತಂದಿರುವುದು ಸರಿಯಲ್ಲ ಎಂದು ಮುಖಂಡ ಕಡಬೂರು ಮಂಜು ಕಿಡಿಕಾರಿದ್ದಾರೆ. 72 ತಿಂಗಳುಗಳ ಕಾಲ ಸಮಯವಕಾಶವಿದ್ದು ರೈತ ಈಗಾಗಲೇ 30 ತಿಂಗಳುಗಳ ಕಂತು ಪಾವತಿ ಮಾಡಿದ್ದಾರೆ ಆದರೆ ಅವಧಿ ಮುಗಿಯುವ ಮುಂಚಿತವಾಗಿಯೇ ಫೈನಾನ್ಸ್ ಸಂಸ್ಥೆ ನಿಷ್ಟುರ ನಡೆಗೆ ಮುಂದಾಗಿರುವುದು ಸರಿಯಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಮುಂಚಿತವಾಗಿ ರೈತನಿಗೆ ಯಾವುದೇ ತಿಳುವಳಿಕೆ ಪತ್ರ ರವಾನಿಸದೆ ಖಾಸಗಿ ಪೈನಾನ್ಸ್ ಸಂಸ್ಥೆ ಏಕಾಏಕಿ ಮನೆಗೆ ಬೀಗ ಜಡಿದಿರುವುದು ಅಕ್ಷಮ್ಯವಾಗಿದೆ, ನ್ಯಾಯಾಲಯದ ಮೆಟ್ಟಿಲೇರುವ ಮುನ್ನ ಸಾಲಪಡೆದವರಿಗೆ ಮಾಹಿತಿ ನೀಡುವ ಸೌಜನ್ಯತೆ ತೋರದೆ ರೈತ ಕುಟುಂಬದ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಸಂಸ್ಥೆ ವಿರುದ್ಧ ಕಿಡಿಕಾರಿದ್ದಾರೆ.

