ಚಾಮರಾಜನಗರ: ತಡ ರಾತ್ರಿ ಸುರಿದ ಭಾರೀ ಮಳೆಗೆ ಚಾಮರಾಜನಗರ ಜಿಲ್ಲೆಯ ಸತ್ಯಮಂಗಲ To ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲ್ಪ ಪ್ರಮಾಣದ ಭೂ ಕುಸಿತ ಸಂಭವಿಸಿದೆ.
ರಾತ್ರಿ ಸುರಿದ ಮಳೆಯಿಂದಾಗಿ, ಲ್ಯಾಂಡ್ ಸ್ಲೈಡಿಂಗ್ ಉಂಟಾಗಿ ಸತ್ಯಮಂಗಲ To ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ವ್ಯತ್ಯಯವಾಗಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ದಿಂಬಂ ಘಾಟ್ ನ 7, 8, ಹಾಗೂ 20 ಮತ್ತು 27ನೇ ಹೇರ್ ಪಿನ್ ಕರುವಿನಲ್ಲಿ ಮಣ್ಣು ಕುಸಿತ ಉಂಟಾಗಿದೆ.
ಮಣ್ಣು ಕುಸಿತದಿಂದ ವಾಹನ ಸವಾರರ ಪರದಾಟ ನಡೆಸುತ್ತಿದ್ದಾರೆ. ಬಣ್ಣಾರಿ ಹಾಗೂ ಅಸನೂರಿನಲ್ಲೇ ವಾಹನಗಳನ್ನ ನಿಲ್ಲಿಸಲು ತಮಿಳುನಾಡು ಪೊಲೀಸರು ಸೂಚಿಸಿದ್ದಾರೆ. ಇನ್ನು ಜೆಸಿಬಿ ಮೂಲಕ ರಸ್ತೆಯಲ್ಲಿ ಬಿದ್ದಿರುವ ಮಣ್ಣಿನ ತೆರವು ಕಾರ್ಯ ಕಾರ್ಯ ನಡೆದಿದೆ. 4 ತಾಸುಗಳ ಕಾಲ ತೆರವು ಕಾರ್ಯ ನಡೆದಿದೆ. ರಸ್ತೆಯಲ್ಲಿ ಬಿದ್ದಿರುವ ಮಣ್ಣು ಹಾಗೂ ಕಲ್ಲುಗಳು ತೆರವು ನಡೆಸುವ ವರೆಗೂ ಸಂಚಾರ ತಡೆಹಿಡಿಯಲಾಗಿತ್ತು.

