ಚಾಮರಾಜನಗರ: ಮೋದಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಚಾಮರಾಜನಗರದ ಉಮ್ಮತ್ತೂರಿನಲ್ಲಿ ಕರಕುಶಲ ಉದ್ಯಮ ನಡೆಸುತ್ತಿರುವ ವರ್ಷಾ ಎಂಬ ಯುವತಿಗೆ ಆಹ್ವಾನಿಸಲಾಗಿದೆ. ಇಂದು ಸಂಜೆ ಪ್ರಮಾಣ ವಚನ ಸ್ವೀಕರಿಸಲಿದ್ದು ಗಣ್ಯಾತಿಗಣ್ಯರಿಗೆ ಅಹ್ವಾನ ನೀಡಲಾಗಿದೆ.

ಮೋದಿ ಅವರ ಮನ್‌ಕಿ ಬಾತ್​ನಿಂದ ಪ್ರೇರಣೆಗೊಂಡು ಕರಕುಶಲ ಉದ್ಯಮ ಆರಂಭಿಸಿದ್ದರು. ಅನುಪಯುಕ್ತ ಬಾಳೆ ದಿಂಡಿನಿಂದ ಅಲಂಕಾರಿಕ ವಸ್ತುಗಳನ್ನು ತಯಾರಿಸುವ ಉದ್ಯಮ ನಡೆಸುತ್ತಿರುವ ವರ್ಷಾ, ಹಲವು ಮಹಿಳೆಯರಿಗೆ ಉದ್ಯಮ ನೀಡುವ ಜೊತೆಗೆ ಸ್ವಾವಲಂಬಿ ಬದುಕು ನಡೆಸುತ್ತಿದ್ದಾರೆ. ವರ್ಷಾ ಸಾಧನೆಯ ಬಗ್ಗೆಯು ಮನ್.ಕಿ ಬಾತ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವೋಕಲ್ ಫಾರ್ ಲೋಕಲ್ ಎಂದು ಪ್ರಶಂಸಿದ್ದರು. ಇದೀಗ ವರ್ಷಾ ಅವರಿಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದ್ದು, ಈಗಾಗಲೇ ನವದೆಹಲಿ ತಲುಪಿದ್ದಾರೆ.