ಗುಂಡ್ಲುಪೇಟೆ: 4 ದಿನಗಳಿಂದ ಇಂದಿರಾ ಕ್ಯಾಂಟೀನ್ ಬಂದ್ ಆಗಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ. ನೌಕರರಿಗೆ ಕಳೆದ 4 ತಿಂಗಳಿನಿಂದ ವೇತನ ಇಲ್ಲಾ- ವಿದ್ಯುತ್ ಬಿಲ್ ಕೂಡ ಕಟ್ಟಿಲ್ಲ ಎಂಬ ಮಾಹಿತಿ ಕೇಳಿ ಬಂದಿದೆ.

ಗ್ಯಾರಂಟಿ ಯೋಜನೆಗಳ ನಡುವೆ ಇಂದಿರಾ ಕ್ಯಾಂಟೀನ್ ಬಡವಾಗಿದೆ. ದುಬಾರಿ ದುನಿಯಾದಲ್ಲಿ5 ರೂ.ಗೆ ತಿಂಡಿ, 10 ರೂ.ಗೆ ಊಟ ಸಿಗುತ್ತಿದ್ದರಿಂದ ಹೆಚ್ಚಿನ ಮಂದಿಗೆ ಕ್ಯಾಂಟೀನ್ ನೆರವಾಗಿತ್ತು. ಕ್ಯಾಂಟಿನ್ ಬಂದ್ ಆಗಿರುವುದಕ್ಕೆ ಕನ್ನಡಪರ ಹೋರಾಟಗಾರ ಮುನಿರ್ ಪಾಷಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.