ಗುಂಡ್ಲುಪೇಟೆ: ಬೀದಿ ನಾಯಿಗಳ ದಾಳಿಗೆ ಕರುವೊಂದು ಬಲಿಯಾರುವ ಘಟನೆ ಪಟ್ಟಣದ ಕೆ ಆರ್ಸಿ ರಸ್ತೆಯಲ್ಲಿನ ಅರಣ್ಯ ಇಲಾಖೆ ಕಚೇರಿ ಹಿಂಭಾಗ ನಡೆದಿದ್ದು ನಾಯಿಗಳ ಡೆಡ್ಲಿ ಅಟ್ಯಾಕ್ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಬುಧವಾರ ಮಧ್ಯರಾತ್ರಿ ರಸ್ತೆ ಬದಿ ಮಲಗಿದ್ದ ಕರುವಿನ ಮೇಲೆ ಐದಕ್ಕೂ ಹೆಚ್ಚು ನಾಯಿಗಳು ಕಚ್ಜಿ ಗಾಯಗೊಳಿಸಿವೆ, ಬೀಡಾಡಿ ಕರುವಿನ ಮೇಲೆ ನಡೆಸಿರುವ ಭೀಕರ ದಾಳಿ ಕಂಡು ಸ್ಥಳೀಯರು ಭಯಭೀತರಾಗಿದ್ದಾರೆ, ಮಕ್ಕಳು ಹಿರಿಯ ನಾಗರಿಕರ ಮೇಲೆ ದಾಳಿ ಮಾಡಿದ್ರೆ ಗತಿಯೇನು ಎಂದು ಪಟ್ಟಣ ನಿವಾಸಿ ಮಂಜುನಾಥ್ ಕಳವಳ ವ್ಯಕ್ತಪಡಿಸಿದ್ದಾರೆ.

ನಾಯಿಗಳ ಗುಂಪು ಕರುವನ್ನ ಕಚ್ಚಿ ಎಳೆದೊಯ್ಯುತ್ತಿದ್ದರೂ ಸಹ ಜೊತೆಯಾಗಿದ್ದ ಮತ್ತೊಂದು ಕರು ಏನು ಮಾಡಲಾಗದ ಪರಿಸ್ಥಿತಿಯಲ್ಲಿ ಅತ್ತಿತ್ತ ಓಡಾಡುತ್ತಿದ್ದ ದೃಶ್ಯ ವೈರಲಾಗಿದೆ. ಇಷ್ಟೆಲ್ಲಾ ಅವಾಂತರಗಳು ನಡೆಯುತ್ತಿದ್ದರೂ ಸಹ ಪುರಸಭೆ ಆಡಳಿತ ಮಂಡಳಿ ಮೌನವಹಿಸಿರುವುದಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.