ಗುಂಡ್ಲುಪೇಟೆ : ಪ್ರಜಾಪ್ರಭುತ್ವದಲ್ಲಿ  ಹೋರಾಟಕ್ಕೆ ಮನ್ನಣೆ ಕೊಡದೆ ರೈತರನ್ನ ಹತ್ತಿಕ್ಕಲು ಪ್ರಯತ್ನಿಸುತ್ತಿರುವ ಡಿಸಿಎಂ ಡಿಕೆ ಶಿವಕುಮಾರ್ ನಡೆ ಸರಿಯಲ್ಲ ಅಂತ  ಗುಂಡ್ಲುಪೇಟೆ ಪಟ್ಟಣದಲ್ಲಿ ಪ್ರತಿಭಟನೆಗಿಳಿದಿದ್ದ ರೈತ ಸಂಘ ಸದಸ್ಯರು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನ ಕೂಗಿದರು.

ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಆದರೆ ರೈತರು ನ್ಯಾಯಕ್ಕಾಗಿ ಹೋರಾಟಕ್ಕಿಳಿದರೆ ಅವರ ಮೇಲೆ ದೌರ್ಜನ್ಯ ಎಸಗಿ ಬೆದರಿಕೆಯೊಡ್ಡಿದ್ದಾರೆ ಎಂದು ರೈತ ಸಂಘ ಜಿಲ್ಲಾಧ್ಯಕ್ಷ ಮಹದೇವಪ್ಪ ಕಿಡಿಕಾರಿದರು.

ತಮ್ಮ ಸ್ವಾಯತ್ತಿತ ಜಮೀನನ್ನ ಉಳಿಸಿಕೊಳ್ಳಲು ರೈತರು ಹೋರಾಟಕ್ಕಿಳಿದಿದ್ದರೆ ಹೊರತು ಬೇರೇನೂ ಅಲ್ಲ, ನೀವು ಚುನಾಯಿತ ಜನಪ್ರತಿನಿದಿ ಎಂಬುದನ್ನ ಗಮನದಲ್ಲಿಟ್ಟುಕೊಂಡು ಮಾತನಾಡಬೇಕು ಅದನ್ನ ಬಿಟ್ಟು ರೈತರನ್ನ ಬೆದರಿಸುವ ಪ್ರವೃತ್ತಿಯನ್ನ ಬಿಟ್ಬಿಡಿ ಅಂತ ಎಚ್ಚರಿಕೆ ನೀಡುವ ಮೂಲಕ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದರು.